ಪಾಕ್ ಗೆ ಬಿಗ್ ಶಾಕ್ ಕೊಟ್ಟ ಭಾರತೀಯ ವಾಯುಸೇನೆ…

ನಮ್ಮ ಭಾರತೀಯ ವಾಯುಸೇನೆ ಜಗತ್ತಿನ 4 ನೇ ಶಕ್ತಿಶಾಲಿ ವಾಯುಪಡೆ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದು ಇಂದು 87 ನೇ ಸಂಸ್ಥಾಪನಾ ದಿನವನ್ನು ಆಚರಿಸುತ್ತಿದೆ. ಭಾರತೀಯ ವಾಯುಸೇನೆಯು ತನ್ನ 87 ನೇ ಸಂಸ್ಥಾಪನಾ ದಿನದಂದು ಪಾಕಿಸ್ಥಾನಕ್ಕೆ ದೊಡ್ಡ ಸಪ್ರ್ರೈಸ್ ನೀಡುವ ಮೂಲಕ ಪಾಕಿಸ್ತಾನಕ್ಕೆ ತೀವ್ರ ಮುಖಭಂಗವಾಗಿದೆ. ಫೆಬ್ರವರಿ ತಿಂಗಳಲ್ಲಿ ಹೊಡೆದುರುಳಿಸಿದ್ದೇವೆ ಎಂದು ಹೇಳಿಕೊಂಡಿದ್ದ ಪಾಕಿಸ್ತಾನ ಭಾರತದ ಸುಖೋಯ್-30 ಎಂಕೆಐ ಯುದ್ಧವಿಮಾನ ಇಂದು ದೆಹಲಿ ಸಮೀಪದ ಹಿಂಡನ್ ವಾಯುನೆಲೆಯಲ್ಲಿ ಹಾರಾಟ ನಡೆಸಿದೆ. ಎರಡು ಬೃಹತ್ ಸುಖೋಯ್ ಯುದ್ಧ ವಿಮಾನಗಳಿಗೆ ಮೂರು ಮಿರಾಜ್-2000 ವಿಮಾನಗಳು ಸಾಥ್ ನೀಡಿ ಅವೇಂಜರ್ ರಚನೆಯನ್ನು ಆಗಸದಲ್ಲಿ ಮೂಡಿಸಿದವು.

ಇಂದು ಹಾರಾಡಿದ ಎರಡು ಸುಖೋಯ್-30 ಎಂಕೆಐ ಯುದ್ಧ ವಿಮಾನಗಳ ಪೈಕಿ ಪಾಕಿಸ್ಥಾನ ಹೊಡೆದುರುಳಿಸಿದ್ದೇವೆ ಎಂದು ಹೇಳಿದ್ದ ಯುದ್ಧ ವಿಮಾನವೂ ಒಂದಾಗಿದೆ. ಇದರ ಕಾಲ್ ಸೈನ್ ಅವೇಂಜರ್ 1 ಆಗಿದೆ. ಬಾಲಾಕೋಟ್ ವೈಮಾನಿಕ ದಾಳಿಯ ಒಂದು ದಿನಗಳ ನಡೆದ ಬೆಳವಣಿಗೆಯಲ್ಲಿ ಈ ವಿಮಾನವನ್ನು ನಾವು ಹೊಡೆದುರುಳಿಸಿದ್ದೇವೆ ಎಂದು ಪಾಕಿಸ್ತಾನ ಹೇಳಿಕೊಂಡಿತ್ತು. ಆದರೆ ಇಂದು ಪಾಕಿಸ್ತಾನಕ್ಕೆ ಸಪ್ರ್ರೈಸ್ ಕಾದಿತ್ತು. ಅದಲ್ಲದೆ ಮತ್ತೊಂದು ಮುಜುಗರ ವಿಚಾರವೆಂದರೆ ಅವೇಂಜರ್ 1ನ್ನು ಇಂದು ಹಾರಿಸಿದ ಪೈಲಟ್‍ಗಳು ಫೆಬ್ರವರಿ 27 ವಾಯು ಕಾದಾಟದಲ್ಲಿ ಸುಖೋಯ್ ಅನ್ನು ಹಾರಿಸಿದ್ದ ಪೈಲಟ್‍ಗಳೇ ಆಗಿದ್ದರು. ಭಾರತ ವಿರುದ್ಧ ಪಾಕಿಸ್ತಾನ ಯಾವತ್ತೂ ಬಡಾಯಿ ಕೊಚ್ಚಿಕೊಂಡರೂ ಕೊನೆಗೆ ಮುಜುಗರಕ್ಕೊಳಗಾಗುವುದು ಪಾಕಿಸ್ತಾನ ಹೊರತು ಭಾರತವಲ್ಲ.

ಫೆಬ್ರವರಿಯಲ್ಲಿ ನಡೆದಿದ್ದ ಬಾಲಕೋಟ್ ದಾಳಿ ವೇಳೆ ಪಾಕಿಸ್ತಾನದ ಎಫ್ -16 ಅನ್ನು ಹೊಡೆದುರುಳಿಸಿದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಹಾಗೂ ಅವರ ತಂಡ ಕೂಡಾ ಹಿಂಡನ್ ವಾಯುನೆಲೆಯಲ್ಲಿ ನಡೆದ ವಾಯುಪಡೆಯ ದಿನದ ಮೆರವಣಿಗೆಯಲ್ಲಿ ಮಿಗ್ -21 ಬಿಸಾನ್ ವಿಮಾನವನ್ನು ಚಲಾಯಿಸಿದ್ದಾರೆ. ‘ಎವೆಂಜರ್ ಫಾರ್ಮೇಷನ್ ನಲ್ಲಿ ಮೂರು ಮಿರಾಜ್ 2000 ವಿಮಾನಗಳು ಮತ್ತು ಎರಡು ಎಸ್ ಯು -30 ಎಂಕೆಐ ಯುದ್ಧ ವಿಮಾನಗಳು ಹಾರಾಟ ನಡೆಸಿವೆ. ರಾಷ್ಟ್ರದ ವಾಯುಪಡೆ 1950ರಿಂದ ನೆರೆಯ ಪಾಕಿಸ್ತಾನ ಹಾಗೂ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದೊಂದಿಗೆ ನಾಲ್ಕು ಯುದ್ಧಗಳಲ್ಲಿ ಭಾಗಿಯಾಗಿದೆ. ಆಪರೇಷನ್ ವಿಜಯ್, ಆಪರೇಷನ್ ಮೇಘದೂತ್, ಆಪರೇಷನ್ ಕ್ಯಾಕ್ಟಸ್ ಮತ್ತು ಆಪರೇಷನ್ ಪೂಮಲೈ ಐಎಎಫ್ ಕೈಗೊಂಡ ಪ್ರಮುಖ ಕಾರ್ಯಾಚರಣೆಗಳಾಗಿವೆ. ಅಲ್ಲದೆ, ವಾಯುಸೇನೆ ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಗಳಲ್ಲೂ ಭಾಗವಹಿಸುತ್ತದೆ.

Be the first to comment