ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಮೂವರು ಉಗ್ರರನ್ನು ಯಮಲೋಕಕ್ಕೆ ಅಟ್ಟಿದ ಭಾರತೀಯ ಸೇನೆ…

ಗಡಿಯಲ್ಲಿ ಸಾಲು ಸಾಲು ಉಗ್ರರ ಹೆಣ ಉರುಳುತ್ತನೇ ಇದ್ದರೂ ಮತ್ತೆ ಮತ್ತೆ ತನ್ನ ದುಷ್ಕøತ್ಯ ಮುಂದುವರಿಸುತ್ತಿದ್ದು ಇದೀಗ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ಬರ್ಜರಿ ಎನ್‍ಕೌಂಟರ್ ನಡೆಸಿದೆ. ಎನ್‍ಕೌಂಟರ್‍ನಲ್ಲಿ ಮೂವರು ಹಿಜ್ಬುಲ್ ಮುಜಾಹಿದ್ದೀನ್ ಉಗ್ರರನ್ನು ಭಾರತೀಯ ಸೇನೆ ಯಮಲೋಕ್ಕೆ ಅಟ್ಟಿದೆ. ಜಮ್ಮು ಮತ್ತು ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಪಜಲ್ಪೋರಾದಲ್ಲಿ ಅವಿತಿದ್ದ ಉಗ್ರರನ್ನು ಸೇನೆ ಕಾರ್ಯಾಚರಣೆ ನಡೆಸಿ ಹೊಡೆದುರುಳಿಸಿದೆ.

ಇಂದು ಮುಂಜಾನೆ ಅನಂತ್ ನಾಗ್ ನ ಪಜಲ್ಪೋರಾದಲ್ಲಿರುವ ಮನೆಯಲ್ಲಿ ಉಗ್ರರು ಅವಿತಿರುವ ಕುರಿತು ಮಾಹಿತಿ ಪಡೆದ ಭಾರತೀಯ ಸೇನೆ ಕೂಡಲೇ ಶಂಕಿತ ಮನೆಯನ್ನು ಸುತ್ತುವರೆದಿದ್ದಾರೆ. ಈ ವೇಳೆ ಸೈನಿಕರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದ್ದು ಅದೇ ವೇಳೆ ಸೈನಿಕರು ಕೂಡ ಪ್ರತಿ ದಾಳಿ ನಡೆಸಿದ್ದಾರೆ. ಸೈನಿಕರ ದಾಳಿಯಲ್ಲಿ ಮೂವರು ಉಗ್ರರು ಹತರಾಗಿದ್ದು, ಮೃತ ಉಗ್ರರರನ್ನು ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರಿದವರು ಎನ್ನಲಾಗುತ್ತಿದೆ. ಮೂವರ ಪೈಕಿ ನಾಸಿರ್ ಚಡ್ರು ಉಗ್ರ ಸಂಘಟನೆಯ ಕಮಾಂಡರ್ ಆಗಿದ್ದ ಎಂದು ತಿಳಿದುಬಂದಿದೆ.

Be the first to comment