ಅಕ್ರಮವಾಗಿ ಭಾರತದೊಳಗೆ ನುಸುಳಲು ಪ್ರಯತ್ನಿಸಿದ ಪಾಕಿಸ್ತಾನಿಯನ್ನು ಹತ್ಯೆ ಮಾಡಿದ ಬಿಎಸ್‍ಎಫ್ ಯೋಧರು…

ಇಡೀ ವಿಶ್ವ ಪಾಕಿಸ್ತಾನವನ್ನು ಅದರ ಹುಚ್ಚಾಟಕ್ಕೆ ದೂರ ಮಾಡಿದರೂ ಪಾಕಿಸ್ತಾನ ಬದಲಾಗುತ್ತಿಲ್ಲ. ಈಗಾಗಲೇ ಭಯೋತ್ಪಾದಕರಿಗೆ ಹಣ ವರ್ಗಾವಣೆ ಹಾಗೂ ಭಯೋತ್ಪಾದಕರನ್ನು ಸಾಕಿ ಸಲಹುತ್ತಿರುವುದಕ್ಕೆ ಪಾಕಿಸ್ತಾನವನ್ನು ಎಫ್‍ಟಿಎಎಫ್ ಡಾರ್ಕ್ ಗ್ರೇ ಪಟ್ಟಿಗೆ ಸೇರಿಸಲು ಮುಂದಾದರೂ ತನ್ನ ನರಿ ಬುದ್ಧಿ ಮಾತ್ರ ಪಾಕಿಸ್ತಾನ ಬಿಡುತ್ತಿಲ್ಲ. ಪಂಜಾಬಿನ ಅಟ್ಟಾರಿಯಲ್ಲಿನ ಭಾರತ- ಪಾಕಿಸ್ತಾನ ಗಡಿಯಲ್ಲಿ ನಿನ್ನೆ ಭಾರತದೊಳಗೆ ಅಕ್ರಮವಾಗಿ ಒಳನುಸುಳಲು ಪ್ರಯತ್ನಿಸಿದ ಪಾಕಿಸ್ತಾನಿಯೊಬ್ಬನನ್ನು ಬಿಎಸ್‍ಎಫ್ ಯೋಧರು ಹತ್ಯೆ ಮಾಡಿದ್ದಾರೆ. ಹತ್ಯೆಯಾದ ಪಾಕಿಸ್ತಾನಿಯನ್ನು ಗುಲ್ನವಾಝ್ ಎಂದು ಗುರುತಿಸಲಾಗಿದೆ. ಅಟ್ಟಾರಿ ಸಮೀಪದ ರೈಲ್ವೇ ಟ್ರ್ಯಾಕ್ ಮೂಲಕ ಈತ ಭಾರತದ ಭೂಪ್ರದೇಶದೊಳಗೆ ಒಳನುಸುಳಲು ಪ್ರಯತ್ನಿಸುತ್ತಿದ್ದ ಎಂದ ಮೂಲಗಳು ತಿಳಿಸಿವೆ. ಸಂಜೆ ರೈಲ್ವೇ ಟ್ರ್ಯಾಕ್ ಮೂಲಕ ಬ್ಯಕ್ತಿಯೊಬ್ಬ ಗೇಟ್ ನಂಬರ್ 10 ಝೀರೋ ಲೈನ್ ಫೆನ್ಸ್ ಸಮೀಪ ನಡೆದುಕೊಂಡು ಬರುತ್ತಿರುವುದನ್ನು ಜಾಯಿಂಟ್ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ನಿರತ ಯೋಧರು ನೋಡಿದರು. ತಕ್ಷಣವೇ ಆತನಿಗೆ ವಾರ್ನಿಂಗ್ ನೀಡಿದರು, ವಾಪಾಸ್ಸು ಹೋಗುವಂತೆ ಸೂಚಿಸಿದರೂ ಕೇಳದಿರುವುದಕ್ಕೆ ಯೋಧರು ಫೈರ್ ಮಾಡಿದ್ದಾರೆ. ಘಟನೆಯ ಬಳಿಕ ಹೆಣವನ್ನು ವಾಪಾಸ್ ಕೊಂಡೊಯ್ಯವಂತೆ ಪಾಕ್ ರೇಂಜರ್‍ಗಳನ್ನು ಧ್ವಜಸಭೆಗೆ ಆಹ್ವಾನಿಸಿದೆ. ಆದರೆ ಇದಕ್ಕವರು ನಿರಾಕರಿಸಿದ್ದಾರೆ ಎನ್ನಲಾಗಿದೆ.

Be the first to comment