ಟಿಆರ್ ಪಿಗೋಸ್ಕರ ಈ ರೀತಿ ಸುದ್ಧಿ ಪ್ರಸಾರ ಮಾಡುವ ಮಾಧ್ಯಮಕ್ಕೆ ನಾಚಿಕೆಯಾಗಲ್ವಾ?!

ಮಾಧ್ಯಮದವರು ಅಂದ್ರೆ ಎಲ್ಲರೂ ಸ್ವಲ್ಪ ಬುದ್ಧಿವಂತರು, ಎಲ್ಲಾ ವಿಚಾರಗಳನ್ನು ತಿಳಿದು ಜನರಿಗೆ ವಿಷಯ ತಿಳಿಸುವವರು, ಚೆನ್ನಾಗಿ ಅರಿತು ಮಾತನಾಡುವವರು ಅಂತೆಲ್ಲಾ ಜನರು ನಂಬಿಕೊಂಡಿದ್ದಾರೆ. ಆದರೆ ಸಾಮಾನ್ಯ ಜ್ಞಾನ ಇಲ್ಲದ ರೀತಿ ಮಾಧ್ಯಮದವರು ಮಾತನಾಡುತ್ತಾರೆ ಎಂದರೆ  ನಾಚಿಕೆಯಾಗಬೇಕು. ತನ್ನ ಟಿಆರ್‍ಪಿಗೋಸ್ಕರ ಇಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರನ್ನು ಗುರಿಯಾಗಿಸಿಕೊಂಡು ಈ ರೀತಿಯಾಗಿ ಸುದ್ಧಿ ಪ್ರಸಾರ ಮಾಡುತ್ತಿರುವುದು ನಿಜಕ್ಕೂ ನಿಮಗೆ ನಾಚಿಕೆಯಾಗಲ್ವಾ?! ಇಂದು ಯಾದಗಿರಿಯಲ್ಲಿ ನಳಿನ್ ಕುಮಾರ್ ಕಟೀಲ್ ರವರು ಮಹಾತ್ಮಾ ಗಾಂಧಿಯವರ 150 ನೇ ಜನ್ಮ ದಿನಾಚರಣೆಯ ನಿಮಿತ್ತ ಪಾದಯಾತ್ರೆಗಳನ್ನು ಮಾಡುತ್ತಾ ಮೂವತ್ತೊಂದು ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಇಂದು ಮೂವತ್ತೆರಡನೇ ಜಿಲ್ಲೆಯಾದ ಯಾದಗಿರಿಗೆ ಬಂದಿದ್ದೇನೆ ಎಂಬ ಮಾತನ್ನು ಹೇಳುತ್ತಾರೆ. ಅವರ ಬಾಯಿಯಿಂದ ಆ ಮಾತು ಹೊರ ಬೀಳುತ್ತಲೇ ಮಾಧ್ಯಮದವರಿಗೆ ಅಮೃತ ಸಿಕ್ಕಂತಾಗಿದೆ. ಇದೆನಪ್ಪಾ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಲ್ಲಿರೋರಿಗೆ ಸಾಮಾನ್ಯ ಜ್ಞಾನನೂ ಇಲ್ವಾ ಅಂತೆಲ್ಲಾ ಟಿವಿಗಳಲ್ಲಿ ಸುದ್ಧಿ ಪ್ರಸಾರ ಮಾಡುತ್ತಿದ್ದಾರೆ.

ರಾಜ್ಯಧ್ಯಕ್ಷರಿಗೆ ಪ್ರಶ್ನೆ ಮಾಡಿ 30 ಜಿಲ್ಲೆ ಓಕೆ ಅದು ಯಾವಾಗ 32 ಜಿಲ್ಲೆಯಾಯ್ತು ಅಂತಾ ಹಲವಾರು ಮಾಧ್ಯಮಗಳು ಪ್ರಸಾರ ಮಾಡಿದ್ವು… ಆದರೆ ಸುದ್ದಿ ಪ್ರಸಾರ ಮಾಡುವುದು ನಿಮ್ಮ ಕರ್ತವ್ಯ ಹೌದು… ಆದರೆ ನಿಮ್ಮ ಟಿಆರ್‍ಪಿಗೋಸ್ಕರ ವಿಷಯ ತೆಳಿದುಕೊಳ್ಳದೆ ಸುದ್ದಿ ಪ್ರಸಾರ ಮಾಡಬೇಡಿ ಇದು ನಮ್ಮ ವಿನಂತಿ. ಯಾಕಂದ್ರೆ ನಿಮಗೆ ಇಡೀ ಜನತೆ ಉಗಿತಾ ಇದಾರೆ. ನಳಿನ್ ಕುಮಾರ್ ಕಟೀಲ್ ಯಾಕೆ ಆ ರೀತಿ ಹೇಳಿರುವುದೇನೆಂದರೆ ಆಡಳಿತಾತ್ಮಕ ಜಿಲ್ಲೆಗಳು ಇರುವುದು 30 ಹೌದು… ಆದರೆ ಸಂಘಟನಾತ್ಮಕವಾಗಿ 36 ಜಿಲ್ಲೆಗಳಿವೆ… ಸಂಘಟನಾತ್ಮಕವಾಗಿ ಕೆಲಸ ಮಾಡಲು ಸುಲಭವಾಗಬೇಕು ಎನ್ನುವ ಉದ್ಧೇಶದಿಂದ ಇದನ್ನು ಬಿಜೆಪಿ 36 ಜಿಲ್ಲೆಗಳಾಗಿ ಡಿವೈಡ್ ಮಾಡಿಕೊಂಡಿದೆ. ಹಾಗಾಗಿ ಅವರು ಯಾದಗಿರಿ 32 ಜಿಲ್ಲೆ ಅಂತಾ ಹೇಳಿರುವುದು. ಉದಾಹರಣೆಗೆ ಬೆಂಗಳೂರು ನಗರ ಹಾಗೂ ಗ್ರಾಮಾಂತರ, ಹುಬ್ಬಳ್ಳಿ. ದಾರವಾಡ ಗ್ರಾಮಾಂತರ ಹೀಗೆ ಸಂಘಟನಾತ್ಮಕವಾಗಿ 36 ಜಿಲ್ಲೆಗಳಾಗಿ ಡಿವೈಡ್ ಮಾಡಿಕೊಂಡಿದೆ. ಅದನ್ನೇ ಇಂದು ನಳಿನ್ ಕುಮಾರ್ ಕಟೀಲ್ ರವರು ಯಾದಗಿರಿಯನ್ನು 32 ನೇ ಜಿಲ್ಲೆ ಎಂದು ಪರಿಗಣಿಸಿದ್ದಾರೆ. ಅದರಲ್ಲೇನಿದೆ ತಪ್ಪು?!

ಕೇವಲ ಮಾಧ್ಯಮ ಅಂತ ಅಂದ್ರೆ ಪುಸ್ತಕ ಬದನೆಕಾಯಿ ಮಾತ್ರ ಓದುವುದಲ್ಲದೆ ಇತರ ವಿಚಾರಗಳನ್ನು ಕೂಡಾ ನಿಮ್ಮ ತಲೆಗೆ ಹೊಕ್ಕಿಸಿಕೊಳ್ಳಬೇಕು… ಇಲ್ಲದೇ ಇದ್ದರೆ ಇದೇ ರೀತಿ ಎಡವಟ್ಟಿನ ಮೇಲೆ ಎಡವಟ್ಟು ಮಾಡಿಕೊಂಡ ನಿಮ್ಮನ್ನು ನೋಡಿ ಇಡೀ ಕರ್ನಾಟಕದ ಜನತೆ ಉಗಿಯೋ ತರಹ ಆಗುತ್ತೆ! ತಮ್ಮ ಟಿಆರ್‍ಪಿಗೋಸ್ಕರ ಬಾಯಿಗೆ ಬಂದ ರೀತಿ ಸುದ್ಧಿ ಪ್ರಚಾರ ಮಾಡುವ ಮೊದಲು ಕೆಲವೊಂದು ಸೂಕ್ಷ್ಮ ವಿಚಾರಗಳನ್ನು ತಿಳಿದು ಮಾಡತನಾಡುವುದು ಒಳಿತು. ಇವತ್ತು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವನ್ನು ನಳಿನ್ ಕುಮಾರ್ ಕಟೀಲ್ ಇವರಿಗೆ ಪಕ್ಷ ಕೊಟ್ಟಿದೆ ಅಂತಾ ಹೇಳಿದ್ರೆ ಸುಮ್ಮನೆ ಕೊಟ್ಟಿಲ್ಲ. ಅವರು ಮಾಡಿದ ಕೆಲಸವನ್ನು ಗುರುತಿಸಿದೆ. ಅವರು ಯಾವ ವಿಚಾರ ಮಾತನಾಡಿದ್ರೂ ಅವರು ಸರಿಯಾಗಿಯೇ ತಿಳಿದು ಮಾತನಾಡುವವರು. ಅದನ್ನು ಬಿಟ್ಟು ಮಾಧ್ಯಮ ಅಂದಾ ಕೂಂಡರೆ ನೀವು ಸುದ್ದಿ ಪ್ರಚಾರ ಮಾಡಿದ ಕೂಡಲೇ ಜನ ನಂಬುತ್ತಾರೆ ಎನ್ನುವುದು ನಿಮ್ಮ ದಡ್ಡತನವಷ್ಟೇ.. ನಿಮಗೆ ನಿಮ್ಮ ಟಿಆರ್‍ಪಿ ಜಾಸ್ತಿ ಮಾಡುವ ಅತಿಯಾಸೆ ಇದ್ದರೆ ಒಳ್ಳೆ ಒಳ್ಳೆ ವಿಚಾರಗಳಿವೆ… ದೇಶದ ಮೂಲೆ ಮೂಲೆಗಳಲ್ಲಿ ದಿನಕ್ಕೆ ಸಾವಿರಾರು ವಿಷಯಗಳು ದೊರಕುತ್ತೆ ಅದನ್ನು ಪ್ರಸಾರ ಮಾಡಿ…

36 ಸಂಘಟನಾತ್ಮಕ ಜಿಲ್ಲೆಗಳ ವಿವರ ಕೆಳಗಿನ ಲಿಂಕ್ ನಲ್ಲಿದೆ.

Organization Districts

 

Be the first to comment