ರಾಹುಲ್ ಗಾಂಧಿಯನ್ನು ಪ್ರಶ್ನಿಸಿದ ರಕ್ಷಣಾ ಸಚಿವ! ರಫೆಲ್ ಯುದ್ಧ ವಿಮಾನದಲ್ಲಿ “ಓಂ” ಬದಲು ಬೇರೆನು ಬರೆಯಬೇಕಾಗಿತ್ತು…?!

ವಿಜಯದಶಮಿ ದಿನದಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ರವರು ಫ್ರಾನ್ಸ್ ನಲ್ಲೇ ಭಾರತೀಯ ಸಂಪ್ರದಾಯದ ಪ್ರಕಾರ ಯುದ್ಧ ವಿಮಾನದ ಮೇಲೆ ಓಂ ಎಂದು ಬರೆಯುವ ಮೂಲಕ ಪೂಜೆಯನ್ನು ನೆರವೇರಿಸಿರುವ ವಿಚಾರ ಎಲ್ಲರಿಗೂ ತಿಳಿದೇ ಇದೆ. ಆದರೆ ವಿರೋಧ ಪಕ್ಷಗಳು ಮಾತ್ರ ಅದಕ್ಕೂ ಕೊಂಕು ನುಡಿದರು. ಆದರೆ ಭಾರತಕ್ಕೆ ಬರುತ್ತಿದ್ದಂತೆಯೇ ರಾಜ್ ನಾಥ್ ಸಿಂಗ್‍ರವರು ಕೊಂಕು ಮಾತುಗಳನ್ನಾಡಿದವರಿಗೆ ಖಡಕ್ ಪ್ರತಿಕ್ರಿಯೆಯನ್ನು ನೀಡಿದ ಬೆನ್ನಲ್ಲೇ ಇದೀಗ ಮತ್ತೆ ರಫೆಲ್ ಯುದ್ಧ ವಿಮಾನಕ್ಕೆ ಪೂಜೆ ಮಾಡಿದ್ದಕ್ಕೆ ವಿರೋಧಿಸಿರುವ ರಾಹುಲ್ ಗಾಂಧಿಗೆ ಪ್ರಶ್ನೆಯೊಂದನ್ನು ಕೇಳಿದ್ದಾರೆ.

ರಫೆಲ್ ಯುದ್ದ ವಿಮಾನಕ್ಕೆ ಫ್ರಾನ್ಸ್ ನಲ್ಲಿ ಸಲ್ಲಿಸಿದ್ದ ಪೂಜೆ ವಿಚಾರವಾಗಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿರುಗೇಟು ನೀಡಿದ್ದಾರೆ. ಆದ್ಯಾತ್ಮಕ್ಕೆ ಸಂಬಂಧಿಸಿದ ಓಂ ಬರೆಯುವುದು ಬೇಡ ಎಂದಾದರೇ ಅಲ್ಲಿ ನಾನು ಬೇರೆನು ಬರೆಯಬೇಕಿತ್ತು ಎಂದು ರಾಹುಲ್ ಗಾಂಧಿಗೆ ರಕ್ಷಣಾ ಸಚಿವಪ್ರಶ್ನಿಸಿದ್ದಾರೆ. ಹರ್ಯಾಣ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ರಾಜನಾಥ ಸಿಂಗ್ ರಫೆಲ್ ಯುದ್ದ ವಿಮಾನಕ್ಕೆ ಪೂಜೆ ಸಲ್ಲಿಸಿದ್ದ ವಿಷಯವನ್ನು ಕಾಂಗ್ರೆಸ್ ಮುಖಂಡರು ಉದ್ದೇಶ ಪೂರ್ವಕವಾಗಿ ವಿವಾದ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲದೆ ಕಾಶ್ಮೀರ ವಿಚಾರವನ್ನೂ ಮಾತನಾಡಿದ ರಾಜನಾಥ್ ಸಿಂಗ್ ಕಾಶ್ಮೀರದಲ್ಲಿ ಎಲ್ಲಿ ಮಾನವ ಹಕ್ಕುಗಳು ಉಲ್ಲಂಘನೆಯಾಗುತ್ತಿದೆ ಎಂಬ ಪ್ರಶ್ನೆಗೆ ಕಾಂಗ್ರೆಸ್ ನಾಯಕರು ಉತ್ತರ ನೀಡಬೇಕು. ಕಾಶ್ಮೀರದಲ್ಲಿ ಉಗ್ರರು ದಾಳಿ ನಡೆಸಿದಾಗ ಮಾನವ ಹಕ್ಕುಗಳು ಉಲ್ಲಂಘನೆಯಾಗುತ್ತಿದೆ. ಆ ಸಮಯದಲ್ಲೇಕೆ ನೀವು ಈ ಬಗ್ಗೆ ಮಾತನಾಡುವುದಿಲ್ಲ ಎಂದು ಪ್ರಶ್ನಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಹಲವಾರು ಮಂದಿಯ ಪ್ರಾಣ ಹೋಗಿದೆ. ಈ ವಿಚಾರ ಸಂಬಂಧ ಕಾಂಗ್ರೆಸ್ ಗಮನ ಹರಿಸುತ್ತಿಲ್ಲ. ಆಂತರಿಕ ವಿಷಯವನ್ನು ಅಂತರಾಷ್ಟ್ರೀಯಗೊಳಿಸಲು ಕಾಂಗ್ರೆಸ್ ಬಯಸುತ್ತಿದೆಯೇ ಎಂದು ರಾಜ್ ನಾಥ್ ಸಿಂಗ್ ಕಾಂಗ್ರೆಸ್ ನ್ನು ಪ್ರಶ್ನಿಸಿದ್ದಾರೆ…

Be the first to comment