ರಾಜಕೀಯ ವಿರೋಧಿಗಳನ್ನು ವಿರೋಧಿಸುವ ಖಯಾಲಿಯಲ್ಲಿ ವೀರ ಸಾವರ್ಕರ್ ರನ್ನು ಅವಮಾನಿಸದಿರಿ ಕಾಂಗ್ರೆಸ್ಸಿಗರೇ…

ಕಾಂಗ್ರೆಸ್ಸಿಗರು ಓಟ್ ಬ್ಯಾಂಕಿಗಾಗಿ ಏನು ಹೇಳಿಕೆ ಕೊಡುವುದಕ್ಕೂ ಸಿದ್ಧ ಎನ್ನುವುದಕ್ಕೆ ಕಾಂಗ್ರೆಸ್ ನ ಮಾಜಿ ಸಿಎಂ ಸಿದ್ದರಾಮಯ್ಯನವರ ನಿನ್ನೆಯ ಹೇಳಿಕೆ ಜ್ವಲಂತ ಸಾಕ್ಷಿ! ಮಂಗಳೂರಿನಲ್ಲಿ ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಸಿದ್ಧರಾಮಯ್ಯನವರ ಹೇಳಿಕೆ ಎಲ್ಲರನ್ನೂ ಕೆರಳಿಸಿದೆ. ಲಕ್ಷಾಂತರ ಹಿಂದೂ, ಕ್ರಿಶ್ಚಿಯನ್ನರ ಮಾರಣಹೋಮ ಮಾಡಿದ ಟಿಪ್ಪು ಕಾಂಗ್ರೆಸ್ಸಿನ ಪ್ರಕಾರ ಸ್ವಾತಂತ್ರ್ಯ ಹೋರಾಟಗಾರ. ಅದೇ ಈ ದೇಶಕ್ಕಾಗಿ ಹೋರಾಟ ಮಾಡಿದ ವೀರ ಸಾವರ್ಕರ್ ರಂತವರು ಇವರ ಕಣ್ಣಿಗೆ ಗಾಂಧಿ ಹತ್ಯೆಯ ಸಂಚುಕೋರ ಎಂದು ದೇಶದ್ರೋಹಿಯಂತೆ ಬಿಂಬಿಸುತ್ತಿದ್ದಾರೆ. ಇದೆಲ್ಲ ನಿಮ್ಮಗೆಲ್ಲಿ ಅರ್ಥವಾಗುತ್ತೆ ಈ ದೇಶವನ್ನು ಪರಕೀಯರಿಂದ ವಾಪಾಸ್ಸು ಪಡೆಯಲು ಇವರಂತಹ ಮಹಾನ್ ವೀರರ ಕಷ್ಟ ಅಲ್ವಾ ಸಿದ್ದರಾಮಯ್ಯನವರೇ?!

ಮಹಾರಾಷ್ಟ್ರ ಚುನಾವಣೆ ನಿಮಿತ್ತ ಬಿಜೆಪಿ ಬಿಡುಗಡೆ ಮಾಡಿದ ಚುನಾವಣಾ ಪ್ರಣಾಳಿಕೆಯಲ್ಲಿದ್ದ ವೀರ ಸಾವರ್ಕರ್ ಗೆ ಮರಣೋತ್ತರ ಭಾರತ ರತ್ನ ಕೊಡಿಸುವ ಭರವಸೆ ನೀಡಿತ್ತು! ಆದರೆ ಮಾಜಿ ಸಿಎಂ ಅದನ್ನೇ ಗಾಳವಾಗಿಸಿಕೊಂಡು ಭಾರತ ರತ್ನದ ವಿಚಾರ ಪ್ರಸ್ತಾಪಿಸುತ್ತ ಮಹಾತ್ಮ ಗಾಂಧಿ ಹತ್ಯೆಯ ಸಂಚುಕೋರರಲ್ಲಿ ಸಾವರ್ಕರ್ ಕೂಡ ಒಬ್ಬರು ಎಂದಿದ್ದಾರೆ. ಅವರಿಗೆ ಭಾರತ ರತ್ನ ನೀಡಿ ಪುರಸ್ಕರಿಸುವುದು ಸರಿಯಲ್ಲ ಎಂದು ಟೀಕಿಸಿದ್ದಾರೆ. ಆದರೆ ಟೀಕಿಸುವ ಮೊದಲು ಮರೆತಿದ್ದರೆ ಮತ್ತೊಮ್ಮೆ ಇತಿಹಾಸವನ್ನೊಮ್ಮೆ ಓದಿ ಸಿದ್ದರಾಮಯ್ಯನವರೆ… ವಿಶ್ವದ ಚರಿತ್ರೆಯಲ್ಲಿ ಕರಿನೀರಿನ ಶಿಕ್ಷೆಗೆ ಗುರಿಯಾದ ಮೊಟ್ಟ ಮೊದಲ ಸ್ವಾತಂತ್ರ್ಯ ಸೇನಾನಿ ಸಾವರ್ಕರ್. ಇಂಗ್ಲೆಂಡಿಗೇ ತೆರಳಿ ಬ್ರಿಟಿಷರ ಎದೆನಡುಗುವಂತೆ ಕ್ರಾಂತಿಕಾರ್ಯ ಸಂಘಟಿಸಿ ನೂರಾರು ತರುಣ ದೇಶಭಕ್ತರ ಪಡೆ ರಚಿಸಿದ ಮೊದಲ ಕ್ರಾಂತಿಕಾರಿ ಸಾವರ್ಕರ್.

ಸತತ 11 ಬಾರಿ ಕಠಿಣ ಸೆರೆವಾಸಕ್ಕೆ ಗುರಿಯಾದ ಅದ್ವಿತೀಯ ಸೇನಾನಿ ಸಾವರ್ಕರ್. ದುರಂತವೆಂದರೆ ಸ್ವಾತಂತ್ರ್ಯ ಬಂದಮೇಲೂ ಭಾರತ ಸರ್ಕಾರದಿಂದಲೇ ಬಂಧನಕ್ಕೆ ಒಳಗಾದ, ಇಲ್ಲಿನ ವ್ಯವಸ್ಥೆಗೆ ನೊಂದು 21 ದಿನಗಳ ಉಪವಾಸದ ಮೂಲಕ ಪ್ರಾಯೋಪವೇಶ ಮಾಡಿ ಆತ್ಮಾರ್ಪಣೆಗೈದ ಮೊದಲ ಚೇತನ ಸಾವರ್ಕರ್. ಇಂತಹ ದೇಶಭಕ್ತನ ಹೆಸರನ್ನು ನೀವು ಹೇಳೋಕು ಲಾಯಕ್ಕಲ್ಲ. ದೇಶಭಕ್ತ ಸಾವರ್ಕರ್ ರನ್ನು ಗಾಂಧಿ ಹತ್ಯೆ ಸಂಚುಕೋರ ಪಟ್ಟ ಕಟ್ಟುವ ನಿಮ್ಮಂತವರ ಮನಸ್ಥಿತಿ ಎಂತಹದ್ದು ಎಂದು ಈಗಾಗಲೇ ತಿಳಿದಿದೆ. ಕೇವಲ ಓಟಿಗೋಸ್ಕರ ಈ ರೀತಿ ಹೇಳಿಕೆ ಕೊಡುವ ಬದಲು ಏನಾದರೂ ಒಳ್ಳೆ ಕೆಲಸ ಮಾಡಿ. ಆಗ ಜನರು ತನ್ನಿಂತಾನೇ ನಿಮಗೆ ಮತ ಹಾಕ್ತಾರೆ… ನಿಮ್ಮನ್ನು ಮತ್ತೆ ರಾಜ್ಯಾವಾಳೋಕೆ ಬಿಡ್ತಾರೆ. ಅದು ಬಿಟ್ಟು ದೇಶಭಕ್ತನಿಗೆ ಈ ರೀತಿ ಪಟ್ಟ ಕಟ್ಟಿದ್ರೆ ಯಾರೂ ನಿಮ್ಮಂತವರಿಗೆ ಓಟು ಹಾಕಲ್ಲ. ಅದರ ಬದಲು ಛೀ ಥೂ ಅಂತಾ ಉಗೀತಾರೆ…

ರಾಷ್ಟ್ರವಾದಿ ವೀರ ಸಾವರ್ಕರರನ್ನು ಮಹಾತ್ಮ ಗಾಂಧಿ ಹತ್ಯೆಯ ಸಂಚುಕೋರ ಎಂದು ನೀವು ಆರೋಪಿಸಿದ್ದೀರಿ. ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ಕಾರಣ ನೀವೇನಾದರೂ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದೀರಾ? ನಿಮಗೇನಾದರೂ ಇತಿಹಾಸದ ತಿಳಿವಳಿಕೆ ಇದೆಯೇ? ನೀವು ಯಾಕೆ ಒಮ್ಮೆ ಸೆಲ್ಯುಲರ್ ಜೈಲಿ ಭೇಟಿ ಕೊಡಬಾರದು! ನಾನು ಆ ಪ್ರವಾಸದ ಪ್ರಾಯೋಜಕತ್ವ ವಹಿಸುತ್ತೇನೆ ಎಂದು ಸಿದ್ದರಾಮಯ್ಯ ಅವರ ಟೀಕೆಗೆ ರಾಜ್ಯದ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದಾರೆ. ಹೌದು ಇಂತಹ ಟೀಕಾಕಾರರಿಗೆ ಅಂದು ಸಾವರ್ಕರ್ ಪಟ್ಟ ಕಷ್ಟ ಇಂತವರಿಗೆ ತೋರಿಸಬೇಕು. ಸಾವರ್ಕರ್ ರವರು ಪಟ್ಟ ಕಠಿಣ ಶ್ರಮ, ತ್ಯಾಗವನ್ನು ರಾಜಕೀಯ ವಿರೋಧಿಗಳನ್ನು ವಿರೋಧಿಸುವ ಖಯಾಲಿಯಲ್ಲಿ ಸಾವರ್ಕರ್ ಅವಮಾನಿಸದಿರಿ… ಕಾಂಗ್ರೆಸ್ಸಿಗರೇ ಇವರ ಬಗ್ಗೆ ಮಾತನಾಡುವವರು ಧಂ ಇದ್ದರೆ ಕರಿನೀರ ಶಿಕ್ಷೆ ಎರಡು ದಿನಕ್ಕಾದರೂ ಅನುಭವಿಸಿ ಬನ್ನಿ!

ದೇಶಕ್ಕಾಗಿ 11 ವರ್ಷ ಅಂಡಮಾನ್ ಜೈಲಿನಲ್ಲಿ ನರಕಯಾತನೆಯ ಕಾಲಾಪಾನಿ ಶಿಕ್ಷೆ ಅನುಭವಿಸಿದ ಸ್ವಾತಂತ್ರ್ಯ ವೀರನಿಗೆ ಭಾರತರತ್ನ ನೀಡುವುದರಲ್ಲಿ ಏನು ತಪ್ಪು ಸಿದ್ಧರಾಮಯ್ಯನವರೇ?! ಕಳೆದ ವರ್ಷ ರಾಜಸ್ಥಾನದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದಾಗ ಶಾಲೆಯ ಇತಿಹಾಸ ಪುಸ್ತದಲ್ಲಿ ವೀರ ಸಾವರ್ಕರ್ ಅವರ ಪಾಠವನ್ನು ತೆಗೆದುಹಾಕಲಾಯಿತಲ್ಲದೆ ಇದೀಗ ಭಾರತ ರತ್ನಕ್ಕೂ ಎಡಪಂಥೀಯ ಹಲವಾರು ಜನ ವಿರೋಧಿಸುತ್ತಿದ್ದಾರೆ… ಇದರ ಹಿಂದಿನ ಅಜೆಂಡಾ ಏನು? ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್‍ರನ್ನು ಕಂಡರೆ ನಿಮಗ್ಯಾಕೆ ಇಷ್ಟೊಂದು ಉರಿ?! ಭಾರತದ ನಿಜವಾದ ವೀರರನ್ನು ಗೌರವಿಸುವ ಸಲುವಾಗಿ ಬಿಜೆಪಿ ಸರ್ಕಾರ ದಿಟ್ಟ ಹೆಜ್ಜೆ ಇಡುತ್ತಿದೆ ಅದಕ್ಕೆ ಬೆಂಬಲಿಸಿ…ಅವರ ನಿಲುವು ಯಾವತ್ತೂ ಸರಿಯಾಗಿರುತ್ತದೆ…

Be the first to comment