ಆರೋಗ್ಯ ಕ್ಷೇತ್ರದಲ್ಲಿ ಭಾರತ ಗಮನಾರ್ಹ ಸುಧಾರಣೆ ಕಂಡಿದೆ ಎಂದು ಶ್ಲಾಘಿಸಿದ ಬಿಲ್ ಗೇಟ್ಸ್…

ಅಮೆರಿಕದ ಪ್ರಸಿದ್ಧ ಸಾಫ್ಟ್ ವೇರ್ ದಿಗ್ಗಜ ಬಿಲ್ ಗೇಟ್ಸ್ ನಿನ್ನೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದು ಬಿಲ್ ಗೇಟ್ಸ್ ಅವರನ್ನು “ಅಭಿವೃದ್ಧಿಗೆ ಜಾಗತಿಕ ಗೋಲ್ ಕೀಪರ್” ಎಂದು ಮೋದಿಜೀ ಹೊಗಳಿದ್ದಾರೆ. ಬಿಲ್ ಆ್ಯಂಡ್ ಮೆಲಿಂಡಾ ಗೇಟ್ಸ್ ಫೌಂಡೇಶನ್ ಸಹ ಅಧ್ಯಕ್ಷರಾಗಿರುವ ಬಿಲ್ ಗೇಟ್ಸ್ ತಮ್ಮ ಭಾಷಣದಲ್ಲಿ ಭಾರತದಲ್ಲಿನ ಅಪೌಷ್ಠಿಕತೆಯ ಸಮಸ್ಯೆಯನ್ನು ಪರಿಹರಿಸಲು ತಮ್ಮ ಫೌಂಡೇಶನ್ ಬಯಸುತ್ತದೆ ಎಂದು ಹೇಳಿದರು. ಬಿಲ್ ಆಂಡ್ ಮೆಲಿಂಡಾ ಗೇಟ್ಸ್ ಫೌಂಡೇಶನ್ ಭಾರತದಲ್ಲಿ ಪರಿಹರಿಸಲು ಬಯಸುವ ಒಂದು ಸಮಸ್ಯೆ ಇದ್ದರೆ ಅದು ಮಹಿಳೆಯರಿಗೆ ಗರ್ಭಿಣಿಯರಿಗೆ ಮತ್ತು ಮಕ್ಕಳ ಅಪೌಷ್ಠಿಕತೆಗೆ ಸಂಬಂಧಿಸಿದ ಸಮಸ್ಯೆಯಾಗಿದೆ. ಈ ಸಮಸ್ಯೆಯನ್ನು ಪರಿಹರಿಸುವುದರಿಂದ ಭಾರತದ ಅಭಿವೃದ್ಧಿಯಲ್ಲಿ ಮಹತ್ವದ ಬದಲಾವಣೆಯಾಗುತ್ತದೆ ಎಂದು ಅವರು ಹೇಳಿದ್ದಾರೆ.

ಕಳೆದ ಒಂದು ದಶಕದಲ್ಲಿ ಭಾರತೀಯ ಆರೋಗ್ಯ ವ್ಯವಸ್ಥೆಯಲ್ಲಿ ಗಮನಾರ್ಹ ಸುಧಾರಣೆಗಳು ಕಂಡುಬಂದಿವೆ ಎಂದು ಅವರು ಹೇಳಿದ್ದಾರೆ. ನಿರ್ದಿಷ್ಟ ರೋಗ ಕಾರ್ಯಕ್ರಮಗಳು ಆಯೋಜನೆಗೊಳ್ಳುತ್ತಿವೆ. ಅಲ್ಲದೆ ಲಸಿಕೆ ವ್ಯಾಪ್ತಿ ಗಣನೀಯವಾಗಿ ಸುಧಾರಿಸಿದೆ. 2011ರಲ್ಲಿ ಭಾರತವು ಪೋಲಿಯೋ ರೋಗದ ಕೊನೆಯ ಪ್ರಕರಣ ಕಂಡುಬಂದಿದೆ ಎಂದು ಬಿಲ್ ಗೇಟ್ಸ್ ಭಾರತದ ಆರೋಗ್ಯ ಸುಧಾರಣೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮಾಧ್ಯಮದೊಂದಿಗೆ ಸಂವಾದ ನಡೆಸಿದ ಬಿಲ್ ಗೇಟ್ಸ್ ಭಾರತದ ಆಧಾರ್ ವ್ಯವಸ್ಥೆ ಹಣಕಾಸು ವ್ಯವಸ್ಥೆ ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆಯನ್ನು ಕಂಡಿದ್ದಕ್ಕೆ ಅಭಿನಂದಿಸಿದ್ದರು. ಮುಂದಿನ ದಶಕದಲ್ಲಿ ಭಾರತ ಅತ್ಯಂತ ಕ್ಷಿಪ್ರಗತಿಯಲ್ಲಿ ಆರ್ಥಿಕ ಬೆಳವಣಿಗೆ ಕಾಣಲಿದೆ. ಇದು ಜನರನ್ನು ಮೇಲಕ್ಕೆತ್ತುವ ಸಾಮಥ್ರ್ಯವನ್ನು ಹೊಂದಿದೆ ಎಂದರು.

ಬಿಲ್ ಗೇಟ್ಸ್ ಅವರನ್ನು ಭೇಟಿಯಾದ ನಂತರ ಪ್ರತಿಕ್ರಿಯಿಸಿದ ಪ್ರಧಾನಿ “ಅವರೊಂದಿಗೆ ಸಂವಹನ ನಡೆಸಲು ಯಾವಾಗಲೂ ಸಂತೋಷವಾಗುತ್ತದೆ” ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಬಿಲ್ ಗೇಟ್ಸ್ ಅವರೊಂದಿಗಿನ ಮಾತುಕತೆ ಅದ್ಭುತವಾಗಿತ್ತು. ವಿವಿಧ ವಿಷಯಗಳ ಬಗ್ಗೆ ಅವರೊಂದಿಗೆ ಸಂವಹನ ನಡೆಸಲು ಯಾವಾಗಲೂ ಸಂತೋಷವಾಗುತ್ತದೆ. ಅವರ ನವೀನ ಉತ್ಸಾಹ ಮತ್ತು ತಳಮಟ್ಟದ ಕೆಲಸದ ಮೂಲಕ ಅವರು ನಮ್ಮ ಭೂಮಿಯನ್ನು ಉತ್ತಮ ಸ್ಥಳವನ್ನಾಗಿ ಮಾಡಲು ಉತ್ಸಾಹದಿಂದ ಕೊಡುಗೆ ನೀಡುತ್ತಿದ್ದಾರೆ” ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ. ಒಟ್ಟಾರೆಯಾಗಿ ಮೋದಿಜೀ ಪ್ರಧಾನಿಯಾದ ಮೇಲೆ ಭಾರತಕ್ಕೆ ಭೇಟಿ ನೀಡಿದ ಪ್ರತೀಯೊಬ್ಬ ವಿಶ್ವ ದಿಗ್ಗಜರ ಬಾಯಲ್ಲಿ ಭಾರತದ ಅಭಿವೃದ್ಧಿಯನ್ನು ಕಂಡು ವಾವ್ ಎಂದು ಹೇಳದೆ ಹೊರಟವರಲ್ಲ… ಇಂತಹ ಪ್ರಧಾನಿಯನ್ನು ಪಡೆದ ನಾವೇ ಧನ್ಯರು…

Be the first to comment