ಆಗ್ರಾ ಹೆಸರನ್ನು ಅಗ್ರವಾನ್ ಆಗಿ ಮರುನಾಮಕರಣ ಮಾಡಲು ಚಿಂತನೆ ನಡೆಸುತ್ತಿದೆ ಯೋಗಿ ಆದಿತ್ಯನಾಥ್ ಸರ್ಕಾರ…

ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಈಗಾಗಲೇ ಹಲವಾರು ಹೆಸರುಗಳನ್ನು ಮರು ನಾಮಕರಣ ಮಾಡಿದ್ದು ಇದೀಗ ಆಗ್ರಾದ ಹೆಸರನ್ನು ಅಗ್ರವಾನ್ ಎಂದು ಮರು ಬದಲಾಯಿಸಲು ಚಿಂತನೆ ನಡೆಸುತ್ತಿದೆ. ಈ ಕುರಿತು ಅಂಬೇಡ್ಕರ್ ವಿಶ್ವವಿದ್ಯಾಲಯದ ಇತಿಹಾಸ ವಿಭಾಗಕ್ಕೆ ಸಂಶೋಧನೆ ನಡೆಸಲು ತಿಳಿಸಿದ್ದು, ಹೆಸರಿನ ಐತಿಹಾಸಿಕ ಅಂಶವನ್ನು ವಿಶ್ಲೇಷಿಸಲು ರಾಜ್ಯ ಸರ್ಕಾರ ಆದೇಶ ನೀಡಿದೆ. ಈ ಪ್ರಸ್ತಾಪ ಬರುತ್ತಿದ್ದಂತೆ ಸಂಶೋಧನೆ ನಡೆಸಲು ಪ್ರಾರಂಭಿಸಿದ್ದೇವೆ ಎಂದು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಮುಖ್ಯಸ್ಥರು ತಿಳಿಸಿದ್ದಾರೆ. ಆಗ್ರಾ ನಗರವನ್ನು ಬೇರೆ ಹೆಸರಿನಿಂದ ಕರೆಯಲಾಗುತಿತ್ತೆ ಈ ಕುರಿತು ಪುರಾವೆಗಳನ್ನು ಸಂಗ್ರಹಿಸಿ ಎಂದು ರಾಜ್ಯ ಸರ್ಕಾರ ನಮಗೆ ಪತ್ರ ಬರೆದಿದೆ. ಈ ಕುರಿತು ನಾವು ಸಂಶೋಧನೆ ಪ್ರಾರಂಭಿಸಿದ್ದೇವೆ. ಸಂಶೋಧನೆ ನಂತರ ಉತ್ತರಿಸುತ್ತೇವೆ ಎಂದು ವಿಭಾಗದ ಮುಖ್ಯಸ್ಥ ಪೆÇ್ರ.ಸುಗಮ್ ಆನಂದ್ ತಿಳಿಸಿದ್ದಾರೆ. ತಾಜ್‍ಮಹಲ್ ಇರುವ ನಗರದ ಮೂಲ ಹೆಸರು ಅಗ್ರವಾನ್ ಎಂದು ಕೆಲವು ಇತಿಹಾಸಕಾರರು ಈಗಾಗಲೇ ಹೇಳಿದ್ದರಿಂದ ಹೆಸರು ಬದಲಾಯಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ಅಗ್ರವಾನ್ ಎಂಬ ಹೆಸರು ಆಗ್ರಾ ಎಂದು ಹೇಗೆ ಬದಲಾಯಿತು, ಯಾವ ಸಂದರ್ಭದಲ್ಲಿ ಆಯಿತು ಎಂಬುವುದನ್ನು ಅಧ್ಯಯನದಿಂದ ಪತ್ತೆ ಮಾಡುವಂತೆ ಸರ್ಕಾರ ಇತಿಹಾಸಕಾರರು ಹಾಗೂ ತಜ್ಞರನ್ನು ಕೇಳಿದೆ.

ಈ ಹಿಂದೆ ನಿಧನರಾದ ಬಿಜೆಪಿ ಶಾಸಕ ಜಗನ್ ಪ್ರಸಾದ್ ಗರ್ಗ್ ಅವರು ಆದಿತ್ಯನಾಥ್ ಅವರಿಗೆ ಪತ್ರ ಬರೆದು, ಆಗ್ರಾ ಎಂಬ ಹೆಸರನ್ನು ಅಗ್ರವಾನ್ ಎಂದು ಮರುನಾಮಕರಣ ಮಾಡುವಂತೆ ಕೋರಿದ್ದರು. ಈಗಾಗಲೇ ಆಗ್ರಾದ ಹೆಸರನ್ನು ಅಗ್ರವಾನ್ ಬದಲಿಸುವ ವಿಚಾರಕ್ಕೆ ಸ್ವಲ್ಪ ಮಟ್ಟಿಗೆ ವಿರೋಧ ವ್ಯಕ್ತಪಡಿಸಿದ್ದರೂ ಇತಿಹಾಸದಲ್ಲಿ ಮೊದಲು ಯಾವ ರೀತಿ ಕರೆಯಲ್ಪಡುತ್ತಿತೋ ಅದನ್ನು ಮತ್ತೆ ಮರುನಾಮಕರಣ ಮಾಡುವುದು ಸರ್ಕಾರದ ಜವಾಬ್ದಾರಿ. ಅದಕ್ಕೆ ಯೋಗಿಜೀ ಸರ್ಕಾರ ಮುಂದಾಗಿದೆ. ಮೊಘಲರ ಅಟ್ಟಹಾಸದಿಂದ ಅನೇಕ ಸ್ಥಳಗಳ ಹೆಸರನ್ನು ಅವರಿಗೆ ಬೇಕಾದಂತೆ ನಾಮಕರಣ ಮಾಡಿದ್ದರು. ಅದನ್ನೀಗ ಒಂದೊಂದಾಗಿಯೇ ಕಿತ್ತೊಗೆದು ಮೂಲ ಹೆಸರನ್ನಿಡುತ್ತಿರುವ ಯೋಗಿ ಸರ್ಕಾರದ ಚಿಂತನೆ ನಿಜಕ್ಕೂ ಶ್ಲಾಘನೀಯ..

ಉತ್ತರ ಪ್ರದೇಶದಲ್ಲಿ ಮೊಘಲರ ಅಟ್ಟಹಾಸವನ್ನು ಮೆರೆದಿದ್ದಕ್ಕೆ ಅನೇಕ ಕುರುಹುಗಳಿವೆ. ಅದನ್ನೀಗಾಗಲೇ ಒಂದೊಂದಾಗಿಯೇ ಯೋಗಿ ಆದಿತ್ಯನಾಥ್ ಸರ್ಕಾರ ಅಳಿಸಿ ಹಾಕಿ ಮರುನಾಮಕರಣ ಮಾಡಿದೆ. ಈಗಾಗಲೇ ಉತ್ತರಪ್ರದೇಶವನ್ನು ಕಂಡು ಕೇಳರಿಯದಂತೆ ಬದಲಾವಣೆ ಮಾಡಿದ ಯೋಗೀಜೀ ಉತ್ತರಪ್ರದೇಶದ ಮೊಘಲ್ ಸರಾಯ್ ರೈಲ್ವೇ ಸ್ಟೇಶನ್ನಿನ ಹೆಸರನ್ನ ಬದಲಿಸಿ ಅದನ್ನ ಪಂಡಿತ್ ದೀನದಯಾಳ್ ಸ್ಟೇಷನ್ ಅಂತ ಮರುನಾಮಕರಣ ಮಾಡಿದ್ದಾರೆ. ಅಲಹಾಬಾದನ್ನು ಪ್ರಯಾಗ್‍ರಾಜ್ ಎಂದು ಮರುನಾಮಕರಣ ಮಾಡಿದೆ. ಫಜಿಯಾಬಾದ್ ಅನ್ನು ಕೂಡಾ ಅಯೋಧ್ಯಾ ಧಾಮ್ ಎಂದು ನಾಮಕರಣ ಮಾಡುವ ಮೂಲಕ ಉತ್ತರಪ್ರದೇಶದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದ್ದು, ಇದೀಗ ಆಗ್ರಾದ ಸರದಿಯಾಗಿದೆ. ಇಡೀ ರಾಜ್ಯದಲ್ಲಿ ಇಂತಹ ಮುಖ್ಯಮಂತ್ರಿ ಇದ್ದರೆ ಸಾಕು ದೇಶ ಅಭಿವೃದ್ಧಿಯಾಗುವುದು ಖಂಡಿತ..

Be the first to comment