ಇತರ ರಾಷ್ಟ್ರಗಳ ವಿರುದ್ಧ ದುಷ್ಕೃತ್ಯವೆಸಗುವುದೇ ಪಾಕ್‍ನ ಮುಖ್ಯ ಧ್ಯೇಯ! ಪಾಕಿಸ್ತಾನದ ವಿರುದ್ಧ ಮತ್ತೆ ಗುಡುಗಿದ ರಾಜನಾಥ್ ಸಿಂಗ್…

ಪಾಪಿ ರಾಷ್ಟ್ರ ಪಾಕಿಸ್ತಾನ ಯಾವತ್ತೂ ತನ್ನ ನರಿ ಬುದ್ಧಿ ಬಿಡಲ್ಲ. ಭಾರತದ ಏಳ್ಗೆಯನ್ನು ಸಹಿಸದೆ ಭಾರತದ ವಿರುದ್ಧ ಸದಾ ಕತ್ತಿಮಸೆಯುತ್ತನೇ ಇರುತ್ತದೆ. ಈ ಪಾಪಿ ರಾಷ್ಟ್ರದ ವಿರುದ್ಧ ಮತ್ತೊಮ್ಮೆ ಸಿಂಗಾಪುರದಲ್ಲಿ ರಾಜ್‍ನಾಥ್ ಸಿಂಗ್ ಗುಡುಗಿದ್ದಾರೆ. ನೆರೆ ರಾಷ್ಟ್ರ ತನ್ನ ಹೆಸರಿಗೆ ತಕ್ಕಂತೆ ಮುಂದೆ ಸಾಗುತ್ತಿಲ್ಲ. ಸದಾಕಾಲ ಇತರೆ ರಾಷ್ಟ್ರಗಳ ಮೇಲೆ ದುಷ್ಕೃತ್ಯವೆಸಗುವುದೇ ಅದಕ್ಕೆ ಮುಖ್ಯವಾಗಿದೆ ಎಂದು ಪಾಕಿಸ್ತಾನದ ವಿರುದ್ಧ ಗುಡುಗಿದ್ದಾರೆ. ಸಿಂಗಾಪುರದಲ್ಲಿ ಅನಿವಾಸಿ ಭಾರತೀಯರನ್ನುದ್ದೇಶಿ ಮಾತನಾಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪಾಕಿಸ್ತಾನದ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ.

ಇದೇ ವೇಳೆ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ 370ನೇ ವಿಧಿ ರದ್ದತಿಯನ್ನು ಸಮರ್ಥಿಸಿಕೊಂಡಿರುವ ಅವರು, ಈ ಹಿಂದೆ ಜಮ್ಮು ಮತ್ತು ಕಾಶ್ಮೀರವನ್ನು ದೇಶದ ಉಳಿದ ಭಾಗಗಳೊಂದಿಗೆ ಸಂಯೋಜಿಸಲಾಗಿರಲಿಲ್ಲ. 370ನೇ ವಿಧಿ ಇದ್ದ ಕಾರಣ ಸಾಕಷ್ಟು ಬದಲಾವಣೆಗಳಿದ್ದವು. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್’ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನಾವು ನೀಡಿದ್ದ ಎಲ್ಲಾ ಭರವಸೆಗಳನ್ನು ಒಂದಾದಾಗಿ ಪೂರೈಸುತ್ತಿದ್ದೇವೆ. ಈ ಹಿಂದಿನ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ರದ್ದು ಮಾಡುವುದಾಗಿ ಭರವಸೆ ನೀಡಿದ್ದೆವು. ಅದನ್ನು ನಾವು ಮಾಡಿದ್ದೇವೆ. ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ ಎಂದು ತಿಳಿಸಿದ್ದಾರೆ.

ಅಲ್ಲದೆ ನಿನ್ನೆ ಸಿಂಗಾಪುರದಲ್ಲಿ ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ಮತ್ತು ಇಂಡಿಯನ್ ನ್ಯಾಷನಲ್ ಆರ್ಮಿಯ ಇತರ ಯೋಧರ ಗೌರವಾರ್ಥ ಸ್ಥಾಪನೆ ಮಾಡಲಾದ ಐಎನ್‍ಎ ಸ್ಮಾರಕದಲ್ಲಿ ಪುಷ್ಪ ನಮನ ಸಲ್ಲಿಕೆ ಮಾಡಿದರು. ಈ ಬಗ್ಗೆ ಟ್ವೀಟ್ ಮಾಡಿದ ರಾಜನಾಥ್ ಸಿಂಗ್ ಸಿಂಗಾಪುರದಲ್ಲಿ ಐಎನ್‍ಎ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದ ಸಂದರ್ಭ ಈ ಶ್ವರ ಲಾಲ್ ಅವರನ್ನು ಭೇಟಿಯಾಗಿ ಸಂತುಷ್ಟನಾದೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ನಾಯಕತ್ವದಲ್ಲಿ ಲಾಲ್ ಅವರು ಇಂಡಿಯನ್ ನ್ಯಾಷನಲ್ ಆರ್ಮಿಗೆ ಸೇವೆ ಸಲ್ಲಿಸಿದ್ದಾರೆ. ಅವರು ಧೈರ್ಯ ಮತ್ತು ಸಾಹಸದ ಸಾಕಾರ ಮೂರ್ತಿ. ಅವರ ಸೇವೆ ಮತ್ತು ತ್ಯಾಗಕ್ಕೆ ನಮ್ಮ ಸೆಲ್ಯೂಟ್ ಎಂದಿದ್ದಾರೆ.

Be the first to comment