ಗುಡ್ ನ್ಯೂಸ್! ಮಧ್ಯಮ ವರ್ಗಕ್ಕೆ ಮತ್ತೊಂದು ಆಗೋಗ್ಯ ಯೋಜನೆಯನ್ನು ತರಲು ಮುಂದಾಗುತ್ತಿದೆ ಮೋದಿ ಸರ್ಕಾರ…

ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರದ ಗದ್ದುಗೆಯನ್ನು ಏರಿದಾಗಿನಿಂದ ದೇಶ ಪ್ರಗತಿಯಾಗುತ್ತಲೇ ಸಾಗುತ್ತಿದೆ. ಪ್ರತೀಯೊಂದು ಕ್ಷೇತ್ರದಲ್ಲಿಯೂ ಮೋದಿ ಮೋಡಿ ನಿಜವಾಗಿಯೂ ವಿರೋಧ ಪಕ್ಷದವರನ್ನೂ ತಲ್ಲಣಗೊಳಿಸುವಂತೆ ಮಾಡುತ್ತದೆ. ಒಂದು ಬಾರಿ ದೇಶದ ಅಭಿವೃದ್ಧಿಗಾಗಿ ದೃಢ ನಿರ್ಧಾರ ಮಾಡಿದರೆ ಆ ಕೆಲಸವಾಗದೆ ಅದನ್ನು ಬಿಡುವವರಲ್ಲ ನಮ್ಮ ಪ್ರಧಾನ ಸೇವಕ ಮೋದಿಜೀ. ಈ ಮುಂಚೆ ಹಲವಾರು ಕಡೆಗಳಲ್ಲಿ ಆರೋಗ್ಯ ಸಮಸ್ಯೆ ಬಂದಾಗ ಬಡ ಜನರು ಸರಿಯಾದ ಚಿಕಿತ್ಸೆಯನ್ನು ಪಡೆಯಲು ಹಣವಿಲ್ಲದೆ ಭಿಕ್ಷೆ ಬೇಡುವ ಪರಿಸ್ಥಿತಿಯನ್ನು ನಾವು ನೋಡುತ್ತಿದ್ದೇವೆ. ಅದಲ್ಲದೆ ಹಲವರು ತಮ್ಮ ಜೀವವನ್ನೇ ಕಳೆದುಕೊಳ್ಳುತ್ತಿದ್ದಾರೆ. ಆದರೆ ಇದನ್ನೆಲ್ಲಾ ಗಮನಿಸುತ್ತಿದ್ದ ನರೇಂದ್ರ ಮೋದಿಯವರು ಇದಕ್ಕೊಂದು ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ನಿರ್ಧರಿಸಿ ಇಡೀ ವಿಶ್ವದಲ್ಲೇ ಇರದ ಆಯುಷ್ಮಾನ್ ಭಾರತ್ ಯೋಜನೆಯನ್ನು ಜಾರಿಗೊಳಿಸಿ ಅದೆಷ್ಟೋ ಲಕ್ಷಾಂತರ ಬಡ ಜನರ ಜೀವ ಉಳಿಯುವಂತಾಗಿದೆ. ಇದೀಗ ಕೇಂದ್ರ ಮತ್ತೊಂದು ಆರೋಗ್ಯ ಯೋಜನೆಯನ್ನು ತರಲು ಮುಂದಾಗಿದೆ.

ಹೌದು… ಆಯುಷ್ಮಾನ್ ಯೋಜನೆಯ ಬಳಿಕ ಇದೀಗ ಕೇಂದ್ರ ಸರ್ಕಾರವು ಮಧ್ಯಮ ವರ್ಗದವರಿಗೆ ಮತ್ತೊಂದು ಆರೋಗ್ಯ ಯೋಜನೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲು ಸಿದ್ಧವಾಗಿದೆ. ಈ ಯೋಜನೆಯು ಆಯುಷ್ಮಾನ್ ಭಾರತ್‍ನಂತೆಯೇ ಇರಲಿದೆ ಎಂದು ಮೂಲಗಳು ತಿಳಿಸಿವೆ. ನೀತಿ ಆಯೋಗ ಈಗಾಗಲೇ ಹೊಸ ಭಾರತಕ್ಕಾಗಿ ಆರೋಗ್ಯ ವ್ಯವಸ್ಥೆ ಎಂದು ಕರೆಯುವ ಯೋಜನೆಯ ವರದಿಯನ್ನು ಅಭಿವೃದ್ಧಿಪಡಿಸುತ್ತಿದೆ. ಆಯೋಗದ ಪ್ರಕಾರ ದೇಶದಲ್ಲಿ ಮಧ್ಯಮ ವರ್ಗದವರಿಗೆ ಅಂತಹ ಯಾವುದೇ ಆರೋಗ್ಯ ಯೋಜನೆ ಇಲ್ಲ ಇದೇ ಕಾರಣಕ್ಕಾಗಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಈ ಹೊಸ ಯೋಜನೆಯನ್ನು ತರಲು ಬಯಸುತ್ತಿದೆ. ಈ ಯೋಜನೆಯು ದೇಶದ ಮಧ್ಯಮ ವರ್ಗದ ಕನಿಷ್ಟ 50% ಜನರನ್ನು ತಲುಪುವ ಗುರಿ ಹೊಂದಿದೆ.

ಇದಲ್ಲದೆ ಯೋಜನೆಯು ಯಶಸ್ವಿಯಾಗಿ ಜಾರಿಗೊಂಡರೆ ಫಲಾನುಭವಿಗಳು ಕೇವಲ 200-300 ರೂ.ಗಳ ಪ್ರೀಮಿಯಂ ಪಾವತಿಸುವ ಮೂಲಕ ಅತ್ಯುತ್ತಮ ಆಯೋಗ್ಯ ಸೇವೆಯನ್ನು ಪಡೆಯಬಹುದಾಗಿದೆ. ಈ ಯೋಜನೆಯಿಂದಾಗಿ ಮಧ್ಯಮ ವರ್ಗಕ್ಕೆ ಸೇರಿದ ಜನರು ತಮ್ಮ ಆರೋಗ್ಯ ವೆಚ್ಚವನ್ನು ಸುಲಭವಾಗಿ ಭರಿಸಲಬಹುದು ಎಂದು ನೀತಿ ಆಯೋಗ ವರದಿಯಲ್ಲಿ ತಿಳಿಸಿದೆ. ಆಯುಷ್ಮಾನ್ ಭಾರತ ಅಡಿಯಲ್ಲಿ ಸುಮಾರು 40% ಬಡವರು ಈಗಾಗಲೇ ಆರೋಗ್ಯ ಯೋಜನೆಗೆ ಒಳಪಟ್ಟಿದ್ದಾರೆ. ಈ ಯೋಜನೆಯಡಿ 2022ರ ವೇಳೆಗೆ 1.5 ಲಕ್ಷ ಆರೋಗ್ಯ ಮತ್ತು ಸ್ವಾಸ್ಧ್ಯ ಕೇಂದ್ರಗಳನ್ನು ತೆರೆಯಲು ಸರ್ಕಾರ ಯೋಜಿಸಿದೆ. ರಕ್ತದೊತ್ತಡ ಮಧುಮೇಹ ಕ್ಯಾನ್ಸರ್ ಮತ್ತು ವೃದ್ಧಾಪ್ಯದ ಕಾಯಿಲೆಗಳು ಸೇರಿದಂತೆ ಹಲವರು ರೋಗಗಳಿಗೆ ಚಿಕಿತ್ಸೆ ನೀಡಲು ಈ ಕೇಂದ್ರಗಳನ್ನು ಸಜ್ಜುಗೊಳಿಸಲಾಗುತ್ತಿದೆ.

Be the first to comment