ಕಲಂ 370 ರದ್ಧತಿ ಕಾಶ್ಮೀರಿಗರಿಗೆ ಭಾರತೀಯ ಹಕ್ಕನ್ನು ನೀಡಿದೆ! ಮೋದಿ ಸರ್ಕಾರದ ನಿರ್ಧಾರವನ್ನು ಶ್ಲಾಘಿಸಿದ ಯುಎಸ್ ಕಾಂಗ್ರೆಸ್ಸಿಗ ಪೀಟ್ ಓಲ್ಸನ್…

ಜಮ್ಮು ಕಾಶ್ಮೀರಕ್ಕೆ ಶಾಪವಾಗಿ ಅಂಟಿದ್ದ ಕಲಂ 370 ಹಾಗೂ 35 ಎ ಯನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕಿತ್ತೊಗೆಯುವ ಮೂಲಕ ಜಮ್ಮು ಕಾಶ್ಮೀರದ ಜನತೆಯನ್ನು ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ. ಇದಕ್ಕೆ ಇಡೀ ವಿಶ್ವದ ಬಲಿಷ್ಟ ರಾಷ್ಟ್ರಗಳೆಲ್ಲಾ ಭಾರತದ ಪರ ನಿಂತಿದೆ. ಇದೀಗ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ 370 ನೇ ವಿಧಿಯನ್ನು ರದ್ದುಪಡಿಸಿದ ಭಾರತದ ಕ್ರಮವನ್ನು ಯುಎಸ್ ಕಾಂಗ್ರೆಸ್ಸಿಗ ಪೀಟ್ ಓಲ್ಸನ್ ಶ್ಲಾಘಿಸಿದ್ದಾರೆ. 70 ವರ್ಷಗಳ ಕಾಲ ಇದ್ದ 370 ನೇ ವಿಧಿಯ ತಾತ್ಕಾಲಿಕ ನಿಬಂಧನೆಯು ಅಲ್ಲಿನ ಜನರನ್ನು ಇತರ ಎಲ್ಲಾ ಭಾರತೀಯರಿಗಿಂತ ವಿಭಿನ್ನ ಕಾನೂನುಗಳ ಅಡಿಯಲ್ಲಿ ಬದುಕುವ ಅನಿವಾರ್ಯತೆಗೆ ದೂಡಿತ್ತು ಎಂದು ಅವರು ಹೇಳಿದ್ದಾರೆ.

ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‍ನಲ್ಲಿ ಮಾತನಾಡಿದ ಓಲ್ಸನ್ ಅವರು ತಾತ್ಕಾಲಿಕ ನಿಬಂಧನೆಯನ್ನು ರದ್ದುಪಡಿಸಿರುವುದರಿಂದ ಜಮ್ಮು ಮತ್ತು ಕಾಶ್ಮೀರದ ಜನರಿಗೆ ಇತರ ಎಲ್ಲಾ ಭಾರತೀಯರಂತೆಯೇ ಬದುಕುವ ಹಕ್ಕುಗಳು ಸಿಕ್ಕಂತಾಗಿದೆ ಎಂದು ಹೇಳಿದ್ದಾರೆ. ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ಭಾರತೀಯ ಸಂವಿಧಾನದಲ್ಲಿ ವಿಶೇಷ ಸ್ಥಾನಮಾನ ನೀಡಲಾಗಿತ್ತು ಎಂಬುವುದನ್ನು ನೆನಪಿಸಿಕೊಂಡ ಓಲ್ಸನ್ ಈ ವರ್ಷ ಭಾರತೀಯ ಸಂಸತ್ತು 370 ನೇ ವಿಧಿಯನ್ನು ಕೊನೆಗೊಳಿಸಬೇಕು ಎಂದು ದೃಢ ನಿರ್ಧಾರ ತೆಗೆದುಕೊಂಡಿತ್ತು. ಈ ನಿರ್ಧಾರ ಜಮ್ಮು ಮತ್ತು ಕಾಶ್ಮೀರದ ಜನರಿಗೆ ಇತರ ಎಲ್ಲಾ ಭಾರತೀಯಂತೆ ಸಮಾನವಾದ ಹಕ್ಕುಗಳನ್ನು ನೀಡಿತು ಎಂದಿದ್ದಾರೆ. ಮೋದಿಯವರ ಈ ನಿರ್ಧಾರ ಜಮ್ಮು ಕಾಶ್ಮೀರದಲ್ಲಿ ಶಾಂತಿಯ ಹೆಜ್ಜೆಯಾಗಲಿದೆ ಎಂದು ಭರವಸೆ ನೀಡಿದರು… ಒಟ್ಟಾರೆಯಾಗಿ ಇಡೀ ವಿಶ್ವದಾದ್ಯಂತ ಮೋದಿ ಯಾವ ನಿರ್ಧಾರ ತೆಗೆದುಕೊಂಡರೂ ಭೇಷ್ ಎನ್ನುತ್ತೆ! ಯಾಕೆಂದರೆ ಮೋದಿಜೀ ತೆಗೆದುಕೊಳ್ಳುವ ಯಾವ ನಿರ್ಧಾರವೂ ದೇಶದ ಒಳಿತನ್ನು ಬಯಸುತ್ತ ಅವರ ಚಿತ್ತವಿರುತ್ತೆ…

Be the first to comment