ಯೋಧರ ಸಮಯ ಪ್ರಜ್ಞೆಗೊಂದು ಸೆಲ್ಯೂಟ್… ಐಇಡಿ ಬಾಂಬ್‍ನ್ನು ನಿಷ್ಕ್ರೀಯಗೊಳಿಸಿ ನೂರಾರು ಜನರ ಪ್ರಾಣ ಉಳಿಸಿದ ಭಾರತೀಯ ಸೇನೆ…

ಯೋಧರು ನಿಜಕ್ಕೂ ಗ್ರೇಟ್… ತನ್ನ ಇಡೀ ಕುಟುಂಬವನ್ನು ಬಿಟ್ಟು ತನ್ನ ಪ್ರಾಣದ ಹಂಗು ತೊರೆದು, ಹಗಲು ರಾತ್ರಿಯೆನ್ನದೆ ಈ ದೇಶವನ್ನು ರಕ್ಷಣೆ ಮಾಡುತ್ತಿದ್ದಾರೆ. ಅಲ್ಲದೆ ಇವರ ಸಮಯ ಪ್ರಜ್ಞೆಗೂ ಸೆಲ್ಯೂಟ್ ಹೊಡೆಯಲೇ ಬೇಕು… ಯಾಕೆಂದರೆ ನಿನ್ನೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ದುಷ್ಕರ್ಮಿಗಳು ಇಟ್ಟಿದ್ದ ಅಪಾಯಕಾರಿ ಐಇಡಿ ಬಾಂಬ್ ಅನ್ನು ಭಾರತೀಯ ಯೋಧರು ನಿಷ್ಕ್ರೀಯಗೊಳಿಸಿದ್ದಾರೆ. ತಪಾಸಣೆಯ ಸಂದರ್ಭದಲ್ಲಿ ಯೋಧರು ಐಇಡಿ ಬಾಂಬ್ ಇರುವುದನ್ನು ಪತ್ತೆ ಹಚ್ಚಿದ್ದರು. ತಕ್ಷಣವೇ ಸ್ಥಳವನ್ನು ಸುತ್ತುವರೆದು ಮುಂಜಾಗ್ರತಾ ಕ್ರಮಗಳನ್ನು ವಹಿಸಿ ಬಳಿಕ ಬಾಂಬ್ ನಿಷ್ಕ್ರೀಯಗೊಳಿಸಲಾಗಿದೆ. ಈ ಮೂಲಕ ನೂರಾರು ಮಂದಿಯ ಪ್ರಾಣವನ್ನು ಉಳಿಸಲಾಯಿತು. ತಕ್ಷಣ ಕಾರ್ಯಪ್ರವೃತ್ತರಾಗಿ ಸಮಯಪ್ರಜ್ಞೆ ಮರೆದು ಬಾಂಬನ್ನು ನಿಷ್ಕ್ರೀಯಗೊಳಿಸಿದ ಸೇನೆಯು ಅಭಿನಂದನೆಗೆ ಅರ್ಹವಾಗಿದೆ. ಕಳೆದ ಕೆಲವು ಸಮಯಗಳಿಂದ ಸೇನೆಯು ಅತ್ಯಂತ ನಿರ್ಣಾಯಕ ರೀತಿಯಲ್ಲಿ ಕ್ರಮಗಳನ್ನು ಕೈಗೊಳ್ಳುತ್ತಿದೆ, ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ. ಇದು ನಿಜಕ್ಕೂ ಶ್ಲಾಘನೀಯ ಕಾರ್ಯ ಎಂದಿದ್ದಾರೆ. ಅಲ್ಲದೇ ಜಮ್ಮ ಕಾಶ್ಮೀರದಲ್ಲಿ ಇನ್ನು ಮುಂದೆ ಶಾಂತಿ ಸ್ಥಾಪನೆಯಾಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಯೋಧರ ಈ ಸಮಯಪ್ರಜ್ಞೆಯಿಂದ ಅದೆಷ್ಟೋ ನೂರಾರು ಜನರ ಪ್ರಾಣ ಉಳಿಯುವಂತಾಗಿದೆ… ಇಂತಹ ಯೋಧರಿಗೆ ಸೆಲ್ಯೂಟ್ ಹೊಡೆಯಲೇ ಬೇಕು…

Be the first to comment