ಉಗ್ರರನ್ನು ಮಟ್ಟಹಾಕಲು ಕಾಶ್ಮೀರದಲ್ಲಿ ಭೂಸೇನೆ, ನೌಕಾಸೇನೆ ಮತ್ತು ವಾಯುಸೇನೆಯ ವಿಶೇಷ ಪಡೆಗಳನ್ನು ನಿಯೋಜಿಸಲಿದೆ ಕೇಂದ್ರ ಸರ್ಕಾರ…

ಭಯೋತ್ಪಾದನೆ ಇಡೀ ವಿಶ್ವಕ್ಕೆ ಮಾರಕ ಅದನ್ನು ಹೊಡೆದೊಡಿಸಬೇಕೆಂದು ಮೋದಿಜೀ ಅಧಿಕಾರವಹಿಸುತ್ತಲೇ ಪಣತೊಡುತ್ತನೇ ಬಂದಿದ್ದಾರೆ. ಭಯೋತ್ಪಾದನಾ ಕೃತ್ಯಗಳು ಎಲ್ಲೇ ನಡೆದರೂ ಭಾರತ ಅದನ್ನು ತೀವ್ರವಾಗಿ ಖಂಡಿಸುತ್ತದೆ. ಆದರೆ ಪಾಕಿಸ್ತಾನದಂತಹ ಪಾಪಿರಾಷ್ಟ್ರಗಳು ಭಯೋತ್ಪಾದನೆಯನ್ನು ದೂರತಳ್ಳಲು ಮನಸ್ಸಿಲ್ಲದೆ ಭಯೋತ್ಪಾದಕರನ್ನು ಸಾಕಿ ಸಲಹುತ್ತಿದ್ದಾರೆ. ಭಾರತದ ಅಭಿವೃದ್ಧಿಯನ್ನು ನೋಡಿ ನಂಜುಕಾರುತ್ತಿರುವ ಪಾಪಿ ರಾಷ್ಟ್ರ ಪಾಕಿಸ್ತಾನ ಭಾರತದ ವಿರುದ್ಧ ದುಷ್ಕøತ್ಯ ನಡೆಸಲು ಹೊಂಚುಹಾಕುತ್ತನೇ ಇರುತ್ತದೆ. ಇದನ್ನು ಮಟ್ಟ ಹಾಕಲು ಇದೀಗ ಮೋದಿ ಸರ್ಕಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಹೌದು… ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆ ಮಟ್ಟ ಹಾಕಲು ಭೂಸೇನೆ, ನೌಕಾಸೇನೆ ಮತ್ತು ವಾಯುಸೇನೆಯ ಕಮಾಂಡೋಗಳನ್ನು ನಿಯೋಜಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ರಕ್ಷಣಾ ಸಚಿವಾಲಯ ಹೊಸದಾಗಿ ರಚಿಸಿದ ಸಶಸ್ತ್ರ ಪಡೆಗಳ ವಿಶೇಷ ಕಾರ್ಯಾಚರಣೆ ವಿಭಾಗದ ಅಧೀನದಲ್ಲಿ ಅತ್ಯುನ್ನತ ತರಭೇತಿ ಪಡೆದ ಭೂ ಸೇನೆಯ ಪ್ಯಾರಾ ಕಮಾಂಡೋಗಳು, ನೌಕಾಪಡೆಯ ಮಾರ್ಕೋಸ್ ಮತ್ತು ವಾಯುಪಡೆಯ ಗಾರ್ಡ್ ಕಮಾಂಡೋಗಳು ಜಂಟಿಯಾಗಿ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಗಳು ನಡೆಸಲಿದ್ದಾರೆ. ಶ್ರೀನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಿಶೇಷ ಪಡೆಗಳನ್ನು ನಿಯೋಜನೆಗೊಳಿಸಲಾಗಿದೆ. ಸಾಂಪ್ರದಾಯಿಕವಾಗಿ ಉಗ್ರರ ಕೇಂದ್ರವಾಗಿರುವ ಪ್ರದೇಶಗಳಲ್ಲಿ ವಿಶೇಷ ಪಡೆಗಳನ್ನು ನಿಯೋಜನೆಗೊಳಿಸಲಾಗಿದೆ. ಪ್ರಸ್ತುತ ಕಣಿವೆಯಲ್ಲಿ ಇರುವ ಸೇನೆಯ ರಾಷ್ಟ್ರೀಯ ರೈಫಲ್ಸ್ ಘಟಕದೊಂದಿಗೆ ಈ ವಿಶೇಷ ಪಡೆಗಳು ಜಂಟಿಯಾಗಿ ಕಾರ್ಯನಿರ್ವಹಿಸಲಿದೆ.

Be the first to comment