ರೈಲು ಪ್ರಯಾಣಿಕರಿಗೆ ಸಿಹಿ ಸುದ್ಧಿ! ಮುಂದಿನ 4 ವರ್ಷಗಳೊಳಗೆ ರೈಲ್ವೆಯ ಸಂಪೂರ್ಣ ವಿದ್ಯುದ್ದೀಕರಣ ನಡೆಯಲಿದೆ…

ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರವಹಿಸಿದ ಬಳಿಕ ಇಡೀ ದೇಶ ಪ್ರತೀಯೊಂದು ಕ್ಷೇತ್ರದಲ್ಲಿಯೂ ಅಭಿವೃದ್ಧಿಯನ್ನು ಕಾಣುತ್ತಿದೆ. ಅದೇ ರೀತಿ ರೈಲ್ವೇ ಇಲಾಖೆಯಲ್ಲೂ ಗಣನೀಯವಾಗಿ ಬೆಳವಣಿಗೆ ಕಾಣುತ್ತಿದೆ. ಮುಂದಿನ ನಾಲ್ಕು ವರ್ಷಗಳೊಳಗೆ ಭಾರತೀಯ ರೈಲ್ವೆಯನ್ನು ಸಂಪೂರ್ಣ ವಿದ್ಯುದ್ದೀಕರಣಗೊಳಿಸುವ ನಿಟ್ಟಿನಲ್ಲಿ ಕಾರ್ಯಗಳು ಮುಂದುವರಿಯುತ್ತಿದೆ ಎಂದು ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ. ಉತ್ತಮ ಮತ್ತು ಮಾಲಿನ್ಯರಹಿತ ಭವಿಷ್ಯಕ್ಕಾಗಿ ಭಾರತೀಯ ರೈಲ್ವೆಯು ವಿದ್ಯುದ್ದೀಕರಣಗೊಳಿಸುವ ನಿಟ್ಟಿನಲ್ಲಿ ಕಾರ್ಯಗಳು ನಡೆಯುತ್ತಿದೆ. ಈ ಮೂಲಕ ಭಾರತೀಯ ರೈಲ್ವೆಯು ವಿಶ್ವದ ಮೊದಲ ಇಂಗಾಲ ಹೊರಸೂಸುವಿಕೆ ಮುಕ್ತ ರೈಲ್ವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಇದರೊಂದಿಗೆ ರೈಲ್ವೆಯು ತನ್ನ ವಿದ್ಯುತ್ತಿನ ಬೇಡಿಕೆಯನ್ನು ಸೌರಶಕ್ತಿಗಳಿಂದ ಪೂರೈಸಲಿದೆ ಎಂದಿದ್ದಾರೆ. 2030 ವೇಳೆಗೆ ಭಾರತೀಯ ರೈಲ್ವೆಯು ಶೂನ್ಯ ಇಂಗಾಲ ಹೊರಸೂಸುವಿಕೆ ರೈಲ್ವೇ ಆಗಲಿದೆ. ಈ ನಿಟ್ಟಿನಲ್ಲಿ ನಾವು ಕಾರ್ಯವನ್ನು ಕೈಗೊಂಡಿದ್ದೇವೆ ಎಂದಿದ್ದಾರೆ. ಸರಕಾರವು ಹಳೆಯ ಕಲ್ಲಿದ್ದಲು ಘಟಕಗಳನ್ನು ಸ್ಥಗಿತಗೊಳಿಸುತ್ತಿದೆ. ಇದರಿಂದ ಪರಿಸಲ ಮಾಲಿನ್ಯ ತಗ್ಗಲಿದೆ ಮತ್ತು ಹೊಸ ಘಟಕಗಳಿಗೆ ಬೇಡಿಕೆ ಸೃಷ್ಟಿಯಾಗಲಿದೆ. ಇದರಿಂದ ಹೊಡಿಕೆಗೆ ಉತ್ತೇಜನ ಸಿಗಲಿದೆ ಎಂದಿದ್ದಾರೆ. ಒಟ್ಟಾರೆಯಾಗಿ ಪ್ರತೀಯೊಂದು ಕ್ಷೇತ್ರದಲ್ಲೂ ಮೋದಿಜೀ ಆಡಳಿತದಿಂದಾಗಿ ಗಣನೀಯ ಬದಲಾವಣೆಯಾಗುತ್ತಿದೆ.

Be the first to comment