ಶ್ರೀ ರಾಮನ ಹೆಸರಲ್ಲಿ ಆಸ್ಪತ್ರೆ ನಿರ್ಮಾಣ ಮಾಡಲು ಭೂಮಿ ನೀಡುವಂತೆ ಮನವಿ ಮಾಡಿಕೊಂಡ ಶಿಯಾ ವಕ್ಫ್ ಮಂಡಳಿ…

ಅಯೋಧ್ಯಾದಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕು ಎಂಬುವುದು ಕೋಟ್ಯಾಂತರ ಭಾರತೀಯರ ಆಶಯವಾಗಿದ್ದು 491 ವರ್ಷಗಳಿಂದ ಈ ಒಂದು ತೀರ್ಪಿಗಾಗಿ ಕೋಟ್ಯಾಂತರ ಭಾರತೀಯರು ಕಾತರದಿಂದ ಕಾಯುತ್ತಿದ್ದರು. ಅದಕ್ಕಾಗಿ ಎಷ್ಟೋ ಹೋರಾಟಗಳು ನಡೆದವು ಸುದೀರ್ಘ ಕಾನೂನು ಪ್ರಕ್ರಿಯೆ ನಡೆಯಿತು. ಕೊನೆಗೂ ಕೋಟ್ಯಾಂತರ ರಾಮ ಭಕ್ತರ ಕನಸು ನನಸಾಯಿತು. ಒಂದು ಕಡೆ ರಾಮ ಮಂದಿರ ನಿರ್ಮಾಣಕ್ಕೆ ಸಜ್ಜಾಗುತ್ತಿದ್ದರೆ ಇತ್ತ ಶಿಯಾ ವಕ್ಫ್ ಮಂಡಳಿ ಅಧ್ಯಕ್ಷ ವಾಸಿಂ ರಿಜ್ವಿ ಪ್ರಭು ಶ್ರೀ ರಾಮನ ಹೆಸರಲ್ಲಿ ಆಸ್ಪತ್ರೆಯ ನಿರ್ಮಾಣ ಮಾಡುವ ಸಲುವಾಗಿ ಭೂಮಿ ನೀಡುವಂತೆ ಮನವಿ ಮಾಡಿಕೊಂಡಿದೆ.

ಹೌದು… ಪ್ರಭು ಶ್ರೀ ಶ್ರೀರಾಮನ ಹೆಸರಿನಲ್ಲಿ ಆಸ್ಪತ್ರೆಯನ್ನು ನಿರ್ಮಾಣ ಮಾಡುವ ಸಲುವಾಗಿ ಭೂಮಿ ನೀಡುವಂತೆ ಶಿಯಾ ವಕ್ಪ್ ಮಂಡಳಿ ಮನವಿ ಮಾಡಿಕೊಂಡಿದೆ. ಅಲ್ಲದೆ ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣ ಮಾಡಲು ಸುಪ್ರೀಂ ಕೋರ್ಟ್ ನೀಡಲು ಹೇಳಿದ್ದ 5 ಎಕರೆ ಭೂಮಿಯನ್ನು ಸುನ್ನಿ ವಕ್ಪ್ ನಿರಾಕರಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಿಯಾ ವಕ್ಪ್ ಮಂಡಳಿ ಅಧ್ಯಕ್ಷ ವಾಸಿಂ ರಿಜ್ವಿ ಅವರು 5 ಎಕರೆ ಭೂಮಿಯನ್ನು ಪಡೆಯಲು ಸುನ್ನಿ ವಕ್ಪ್ ಮಂಡಳಿ ಮತ್ತು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಗೆ ಆಸಕ್ತಿ ಇಲ್ಲ ಎಂದಾದರೆ ಭೂಮಿಯನ್ನು ಶಿಯಾ ವಕ್ಪ್ ಮಂಡಳಿಗೆ ನೀಡಬೇಕು ಎಂದಿದ್ದಾರೆ.

ಆ ಭೂಮಿಯಲ್ಲಿ ನಾವು ಪ್ರಭು ಶ್ರೀರಾಮನ ಹೆಸರಿನಲ್ಲಿ ಆಸ್ಪತ್ರೆಯನ್ನು ನಿರ್ಮಾಣ ಮಾಡುತ್ತೇವೆ. ಮಾತ್ರವಲ್ಲ ಅದೇ ಜಾಗದಲ್ಲಿ ದೇಗುಲ, ಮಸೀದಿ, ಚರ್ಚ್ ಮತ್ತು ಗುರು ದ್ವಾರಗಳನ್ನೂ ನಿರ್ಮಾಣ ಮಾಡುತ್ತೇವೆ ಎಂದಿದ್ದಾರೆ. ಸೌದಿ ಅರೇಬಿಯಾ ತಮ್ಮದು ಮಹಮ್ಮದ್ ಪೈಗಂಬರ್ ಹುಟ್ಟಿದ ನಾಡೆಂದು ಹೆಮ್ಮೆ ಪಡುವಂತೆ ಭಾರತೀಯರು ಕೂಡಾ ನಮ್ಮದು ಶ್ರೀ ರಾಮನ ನಾಡು ಎಂದು ಹೆಮ್ಮೆ ಪಟ್ಟುಕೊಳ್ಳಬೇಕು ಎಂದಿದ್ದಾರೆ. ಅಯೋಧ್ಯೆಯ ವಿವಾದಿತ ಭೂಮಿಯನ್ನು ರಾಮಮಂದಿರ ನಿರ್ಮಾಣಕ್ಕೆ ನೀಡಿರುವ ಸುಪ್ರೀಂಕೋರ್ಟ್ ಮುಸ್ಲಿಮರಿಗೆ ಬೇರೆ ಕಡೆ ಐದು ಎಕರೆ ಭೂಮಿಯನ್ನು ನೀಡುವಂತೆ ಸೂಚನೆ ನೀಡಿದೆ. ಆದರೆ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ತೀರ್ಪನ್ನು ತಿರಸ್ಕರಿಸಿ ಮರು ಪರಿಶೀಲನಾ ಅರ್ಜಿ ಸಲ್ಲಿಸಲಿದೆ. ಒಟ್ಟಾರೆಯಾಗಿ 491 ವರ್ಷಗಳಿಂದ ಕಂಡ ಕನಸು ನನಸಾಗಿದೆ. ಈ ತೀರ್ಪರನ್ನು ಎಲ್ಲಾ ಧರ್ಮದವರೂ ಸ್ವೀಕರಿಸಿರುವುದು ನಿಜಕ್ಕೂ ಹೆಮ್ಮೆಯ ವಿಚಾರ…

Be the first to comment