ಇಸ್ರೋದಿಂದ ಮತ್ತೊಂದು ಮಹತ್ವದ ಮೈಲಿಗಲ್ಲು! ಕಾರ್ಟೋಸ್ಯಾಟ್ 3, ಯುಎಸ್ ನ 13 ನ್ಯಾನೋ ಉಪಗ್ರಹಗಳ ಯಶಸ್ವಿ ಉಡಾವಣೆ…

ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಇದೀಗ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದೆ. ಸುಧಾರಿತ ಭೂ ವೀಕ್ಷಣೆ ಉಪಗ್ರಹ ಕಾರ್ಟೊಸ್ಯಾಟ್-3 ಮತ್ತು 13 ಯುಎಸ್ ನ್ಯಾನೊ ಸ್ಯಾಟಲೈಟ್ ಗಳನ್ನು ಹೊತ್ತೊಯ್ದ ಉಡಾವಣಾ ವಾಹಕ ಪಿಎಸ್‍ಎಲ್ ವಿ-ಸಿ47 ರಾಕೆಟ್ ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಂದು ಬೆಳಗ್ಗೆ ಯಶಸ್ವಿಯಾಗಿ ಉಡಾವಣೆಗೊಂಡಿದೆ. 1625 ಕೆಜಿ ತೂಕದ ಕಾರ್ಟೊಸ್ಯಾಟ್ -3 ಸುಧಾರಿತ ಕ್ಷಿಪ್ರ ಉಪಗ್ರಹವಾಗಿದ್ದು, ಇದರ ಜೀವಿತಾವಧಿ 5 ವರ್ಷಗಳು.

ಕಾಟೋಸ್ಯಾಟ್-3 ಭೌಗೋಳಿಕ ಗಡಿಯನ್ನು ಹೆಚ್ಚು ಸ್ಪಷ್ಟತೆಯಿಂದ ಗುರುತಿಸುವ ಮತ್ತು ಭೂಪಟ ರಚನೆಗೆ ಸಹಕಾರಿಯಾಗಲಿದೆ. ಅಲ್ಲದೆ, ಈ ಎಲ್ಲ ಉಪಗ್ರಹಗಳು ಸೂರ್ಯ ಸ್ಥಿರ ಕಕ್ಷೆಗೆ ಅಂದರೆ ಸೂರ್ಯನ ಬೆಳಕು ಇರುವ ಸಮಯದಲ್ಲೇ ಉಪಗ್ರಹ ಭೂಪ್ರದೇಶವನ್ನು ಹಾದುಹೋಗುವಂತೆ ಮಾಡುವ ಕಕ್ಷೆ ಸೇರಲಿವೆ. ಕಾಟೋಸ್ಯಾಟ್-3 ಮೂರನೇ ತಲೆಮಾರಿನ ಅತ್ಯಾಧುನಿಕ ಸುಧಾರಿತ ಉಪಗ್ರಹವಾಗಿದ್ದು, ಇದು ಹೈ-ರೆಸಲ್ಯೂಷನ್ ಇಮೇಜಿಂಗ್ ಸಾಮಥ್ರ್ಯ ಹೊಂದಿದೆ. ಇದರ ಜತೆಗೆ ಡಿಸೆಂಬರ್ ನಲ್ಲಿ ಮಿಲಿಟರಿ ಉದ್ದೇಶ ಹೊಂದಿರುವ ಇನ್ನೆರಡು ಉಪಗ್ರಹಗಳನ್ನು ಇಸ್ರೊ ಉಡಾವಣೆ ಮಾಡಲಿದೆ.

Be the first to comment