ದಿಯು ದಮನ್ , ದಾದ್ರ ನಗರ್ ಹವೇಲಿ ವಿಲೀನಕ್ಕೆ ಲೋಕಸಭೆಯಲ್ಲಿ ಮಸೂದೆ ಮಂಡನೆ…

ಈಗಾಗಲೇ ಜಮ್ಮು ಮತ್ತು ಕಾಶ್ಮೀರವನ್ನು ಹಾಗೂ ಲಡಾಖ್‍ನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ವಿಭಜನೆ ಮಾಡಿದ ಬಳಿಕ ಇದೀಗ ಮೋದಿ ಸರ್ಕಾರ ಮತ್ತೊಂದು ನಿರ್ಧಾರವನ್ನು ತೆಗೆದುಕೊಂಡಿದೆ. ದಿಯು, ದಮನ್ ಮತ್ತು ದಾದ್ರಾ ನಗರ್ ಹವೇಲಿ ಪ್ರದೇಶಗಳನ್ನು ವಿಲೀನಗೊಳಿಸುವ ನಿರ್ಧಾರವನ್ನು ಕೈಗೊಂಡಿದೆ. ಕೇಂದ್ರಾಡಳಿತ ಪ್ರದೇಶಗಳಾದ ದಿಯು ದಮನ್ ಮತ್ತು ದಾದ್ರ ನಗರ್ ಹವೇಲಿಗಳನ್ನು ವಿಲೀನಗೊಳಿಸುವ ಮಸೂದೆಯು ನಿನ್ನ ಲೋಕಸಭೆಯಲ್ಲಿ ಮಂಡನೆಯಾಗಿದೆ. 2 ಕೇಂದ್ರಾಡಳಿತ ಪ್ರದೇಶಗಳನ್ನು ಪರಸ್ಪರ ವಿಲೀನಗೊಳಿಸುವ ಮಸೂದೆಯನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಗಿದೆ. ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ. ಕಿಶನ್ ರೆಡ್ಡಿ ಅವರು ಉಭಯ ಕೇಂದ್ರಾಡಳಿತ ಪ್ರದೇಶಗಳನ್ನು ವಿಲೀನಗೊಳಿಸುವ ಮಸೂದೆಯನ್ನು ಪರಿಚಯಿಸಿದರು.

ಗುಜರಾತ್ ಗೆ ಹೊಂದಿಕೊಂಡಿರುವಂತೆ ಪಶ್ಚಿಮ ಕರಾವಳಿಯಲ್ಲಿರುವ ದಮನ್-ದಿಯು ಮತ್ತು ದಾದ್ರಾ-ನಗರ್ ಹವೇಲಿಗಳನ್ನು ಒಂದೇ ಕೇಂದ್ರಾಡಳಿತ ಪ್ರದೇಶವನ್ನಾಗಿ ವಿಲೀನ ಮಾಡುವುದರಿಂದ ಉತ್ತಮ ಆಡಳಿತ ಒದಗಿಸಲು ಹಾಗೂ ವಿವಿಧ ಕೆಲಸಗಳು ಪುನರಾರ್ವತನೆ ಆಗುವುದನ್ನು ತಡೆಯಲು ಸಾಧ್ಯ. ಈ ಎರಡೂ ಕೇಂದ್ರಾಡಳಿತ ಪ್ರದೇಶಗಳು ಕೇವಲ 35 ಕಿಮೀ ಅಂತರದಲ್ಲಿದ್ದರೂ ಅವು ಪ್ರತ್ಯೇಕ ಬಜೆಟ್ ಹೊಂದಿವೆ ಹಾಗೂ ಎರಡಕ್ಕೂ ಪ್ರತ್ಯೇಕ ಆಡಳಿತದ ಕಾರ್ಯಾಲಯಗಳಿವೆ. ದಾದ್ರಾ ಮತ್ತು ನಗರ್ ಹವೇಲಿಯಲ್ಲಿ ಒಂದು ಜಿಲ್ಲೆಯಿದ್ದು, ದಮನ್ ಮತ್ತು ದಿಯುನಲ್ಲಿ ಎರಡು ಜಿಲ್ಲೆಗಳಿವೆ.

Be the first to comment