ವಿದೇಶಿ ಪ್ರವಾಸದ ವೇಳೆಯೂ ಉಳಿತಾಯ! ವಿಶ್ರಾಂತಿಗಾಗಿ ಹೋಟೆಲ್‍ಗಳ ಬದಲು ಏರ್ ಪೋರ್ಟ್ ಕೊಠಡಿಗಳನ್ನೇ ಬಳಸುತ್ತಾರೆ ಮೋದಿಜೀ…

ಪ್ರಧಾನಿ ನರೇಂದ್ರ ಮೋದಿಯವರು ಎರಡು ಬಾರಿ ಪ್ರಧಾನಿಯಾಗಿ ಇಡೀ ವಿಶ್ವ ಮೆಚ್ಚಿದ ನಾಯಕನಾದರೂ ಅವರು ಎಲ್ಲೇ ಹೋದರೂ ಅವರ ಸಿಂಪ್ಲಿಸಿಟಿ ನಿಜಕ್ಕೂ ಮೆಚ್ಚುವಂತಹದ್ದು. ಸಾರ್ವಜನಿಕ ಹಣವನ್ನು ಯಾವತ್ತೂ ದುಂದುವೆಚ್ಚ ಮಾಡಲು ಬಯಸದ ಮೋದಿಜೀ ತನ್ನ ವಿದೇಶಿ ಪ್ರವಾಸದಲ್ಲೂ ಉಳಿತಾಯ ಮಾಡುತ್ತಿದ್ದಾರೆ. ಹೇಗೆ ಗೊತ್ತಾ?! ಹೌದು… ಮೋದಿಜೀಯ ಬಗ್ಗೆ ಲೋಕಸಭೆಯಲ್ಲಿ ಮಾತನಾಡಿರುವ ಗೃಹ ಸಚಿವ ಅಮಿತ್ ಶಾ ಅವರು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ವಿದೇಶ ಪ್ರಯಾಣದ ವೇಳೆ ತಾಂತ್ರಿಕ ನಿಲುಗಡೆ ಅಥವಾ ವಿಮಾನದ ವಿಮಾನ ಇಂಧನ ಮರು ಪೂರಣದ ಸಂದರ್ಭಗಳಲ್ಲಿ ಐಷಾರಾಮಿ ಹೋಟೆಲ್‍ಗಳ ಬದಲು ವಿಮಾನ ನಿಲ್ದಾಣಗಳ ವಿಶ್ರಾಂತಿ ಕೊಠಡಿಗಳನ್ನು ಆಶ್ರಯಿಸುತ್ತಾರೆ. ವಿದೇಶ ಪ್ರವಾಸ ವೇಳೆ ಇಂಧನ ತುಂಬಿಸಿಕೊಳ್ಳಲು ವಿಮಾನ ಯಾವುದೇ ದೇಶದಲ್ಲಿ ತಾಂತ್ರಿಕವಾಗಿ ತಂಗಿದಾಗ ರಾತ್ರಿ ವೇಳೆ ಹೊಟೇಲ್ ನಲ್ಲಿ ವಾಸ್ತವ್ಯವಿರುವುದು ಹಿಂದಿನಿಂದ ನಡೆದುಕೊಂಡು ಬಂದ ಪದ್ಧತಿ. ಆದರೆ ಇಂತಹ ಸಂದರ್ಭದಲ್ಲಿ ಮೋದಿಜೀ ಮಾತ್ರ ಹೊಟೇಲ್ ರೂಮ್ ಬುಕ್ ಮಾಡುವುದಿಲ್ಲ.

ವಿಮಾನ ನಿಲ್ದಾಣದ ಟರ್ವಿನಲ್ ನಲ್ಲೇ ಇದ್ದು ವಿಶ್ರಾಂತಿ ಪಡೆಯುತ್ತಾರೆ. ಅಲ್ಲದೆ ಪ್ರಧಾನಿ ಜೊತೆ ತೆರಳುವ ಅಧಿಕಾರಿಗಳ ಸಂಖ್ಯೆಯನ್ನು ಶೇಕಡಾ 20ಕ್ಕೆ ಇಳಿಸಲಾಗಿದೆ. ಸಿಬ್ಬಂದಿಗಾಗಿ ಪ್ರತ್ಯೇಕ ವಾಹನ ವ್ಯವಸ್ಥೆ ಇರುತ್ತದೆ. ನಾಲ್ಕರಿಂದ ಐದು ಜನರು ಪ್ರಯಾಣಿಸಬಹುದಾದ ಕಾರ್ ಅಥವಾ ಬಸ್ ವ್ಯವಸ್ಥೆ ಮಾಡಬೇಕೆಂದು ಮೋದಿ ಸೂಚಿಸಿದ್ದಾಗಿ ಷಾ ತಿಳಿಸಿದ್ದಾರೆ. ಸ್ವತಃ ಪ್ರಧಾನಿಯವರೇ ಇಂತಹ ನಿಯಮಗಳನ್ನು ಪಾಲಿಸುತ್ತಿರುವಾಗ ಇನ್ನೊಂದೆಡೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಭದ್ರತಾ ವ್ಯವಸ್ಥೆಯನ್ನೇ ಪ್ರತಿಷ್ಠೆ ಸಂಕೇತ ಮಾಡಿಕೊಂಡಿದ್ದರು. ಪ್ರಧಾನಮಂತ್ರಿಗೆ ನೀಡಬೇಕಾದ ಭದ್ರತಾ ಸೌಲಭ್ಯ ಅನುಭವಿಸುತ್ತಿದ್ದರು ಎಂದು ಪರೋಕ್ಷವಾಗಿ ಅವರನ್ನು ಟೀಕಿಸಿದರು.

Be the first to comment