ಪಶುವೈದ್ಯೆ ಪ್ರಿಯಾಂಕಾ ರೆಡ್ಡಿ ಕೊಲೆ ಪ್ರಕರಣದಲ್ಲಿ ಆರೋಪಿ ಮೊಹಮ್ಮದ್ ಪಾಷಾ ಬಂಧನ…

ಬುಧವಾರ ರಾತ್ರಿ ನಾಪತ್ತೆಯಾಗಿದ್ದ 26 ವರ್ಷದ ಪಶುವೈದ್ಯೆಯ ಶವ ಸುಟ್ಟು ಕರಕಲಾದ ರೀತಿಯಲ್ಲಿ ಪತ್ತೆಯಾಗಿದೆ. ತೆಲಂಗಾಣದ ಕೊಲ್ಲೂರು ಗ್ರಾಮದ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಪಶುವೈದ್ಯೆಯಾದ ಪ್ರಿಯಾಂಕಾ ರೆಡ್ಡಿ, ಬುಧವಾರ ಬೆಳಗ್ಗೆ ಶಾದ್‍ನಗರದ ತನ್ನ ಮನೆಯಿಂದ ತಾನು ಕೆಲಸ ಹೋಗುವುದಾಗಿ ಹೇಳಿ ಮನೆಯಿಂದ ಹೊರಟು ನಂತರ ರಾತ್ರಿ ಬೈಕ್ ಪಂಕ್ಚರ್ ಆಗಿದೆ ಎಂದು ತನ್ನ ತಂಗಿಗೆ ಕರೆ ಮಾಡಿ ನಂತರ ನಾಪತ್ತೆಯಾಗಿದ್ದರು. ಆದರೆ ಕೊನೆಗೆ ಸಿಕ್ಕಿದ್ದು ಸುಟ್ಟು ಕರಕಲಾದ ದೇಹ ಮಾತ್ರ!

ರಾತ್ರಿ 9.15ರ ಹೊತ್ತು, ಟೋಲ್ ಗೇಟ್ ಬಳಿ ಅಪರಿಚಿತ ಮಂದಿ ಮತ್ತು ಒಂದಷ್ಟು ಟ್ರಕ್ ಗಳು ನಿಂತಿದ್ದವು. ಅಷ್ಟರಲ್ಲಿ ಸ್ಕೂಟರ್ ಪಂಕ್ಚರ್ ಆಗಿತ್ತು. ಗಾಡಿ ಕೆಟ್ಟು ಹೋಗಿದೆ ಎಂದು ತನ್ನ ಸೋದರಿಗೆ ಕರೆ ಮಾಡಿದ್ದರು. ಆಗ ಗಾಡಿ ಅಲ್ಲೇ ಬಿಟ್ಟು ಮನೆಗೆ ಬಾ ಎಂದಿದ್ದರಂತೆ, ನಂತರ ಕೆಲ ಅಪರಿಚಿತ ವ್ಯಕ್ತಿಗಳು ಸಹಾಯಕ್ಕೆ ಬಂದಿದ್ದಾರೆ ಎಂದು ಪ್ರಿಯಾಂಕಾ ಭವ್ಯರಿಗೆ ಫೆÇೀನ್ ನಲ್ಲಿ ಹೇಳಿ ಕಟ್ ಮಾಡಿದ್ದರು.

ನಂತರ ನಿನ್ನೆ ಬೆಳಗ್ಗೆ ಪ್ರಿಯಾಂಕಾ ಮನೆಯವರಿಗೆ ಸಿಕ್ಕಿದ್ದು ಶವವಾಗಿ. ಆರೋಪಿಗಳು ದೇಹವನ್ನು ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದರು. ವೈದ್ಯೆಯ ದೇಹದಲ್ಲಿದ್ದ ಲಾಕೆಟ್ ನಿಂದ ಗುರುತು ಪತ್ತೆಯಾಗಿದೆ. ಹತ್ಯೆಗೆ ಮುನ್ನ ಅಪಹರಣ ಮಾಡಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಪ್ರಕರಣದಲ್ಲಿ ಮೊಹಮ್ಮದ್ ಪಾಷಾ ಎಂಬಾತನನ್ನು ಹೈದ್ರಾಬಾದ್ ಪೆÇಲೀಸರು ಬಂಧಿಸಿದ್ದು ಉಳಿದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಪಶುವೈದ್ಯೆ ಪ್ರಿಯಾಂಕಾ ರೆಡ್ಡಿ ಸಾವಿಗೆ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಇಂತಹ ರಾಕ್ಷಸ ಪ್ರವೃತ್ತಿ ಹೊಂದಿರುವ ಮೊಹಮ್ಮದ್ ಪಾಷಾ ಹಾಗೂ ಆತನ ಸಂಗಡಿಗರಿಗೆ ಸರಿಯಾಗಿ ಶಿಕ್ಷೆ ಕೊಡಬೇಕು.

Be the first to comment